ಬೆಂಗಳೂರು,ಡಿಸೆಂಬರ್,18,2020(www.justkannada.in) : ವಿಧಾನಪರಿಷತ್‌ನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿಧಾನಪರಿಷತ್ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಡಿ.15 ರಂದು ವಿಧಾನಪರಿಷತ್ ಕಲಾಪದಲ್ಲಿ ಹಿಂದೆಂದೂ ನಡೆಯದಂತಹ ದೊಡ್ಡ ಗಲಾಟೆ ನಡೆದಿದ್ದು, ಈ ನೋಟೀಸ್‌ನಲ್ಲಿ ಹಲವಾರು ಪ್ರಶ್ನೆಗಳನ್ನು ವಿಧಾನಪರಿಷತ್ ಕಾರ್ಯದರ್ಶಿಗೆ ಕೇಳಲಾಗಿದೆ. ಅಲ್ಲದೆ ಈ ಪತ್ರದ ಮೂಲಕ ನೀವು 48 ಘಂಟೆಯೊಳಗೆ ಉತ್ತರ ಕೊಡಬೇಕು ಎಂದೂ ಹೇಳಿದ್ದಾರೆ.
ಪತ್ರದಲ್ಲಿ ಡಿ.15 ರಂದು ಪರಿಷತ್ ಕಲಾಪದಲ್ಲಿ ಗಲಭೆ ಆಗಿದ್ದು ಏಕೆ..? ಸಭಾಪತಿಗಳು ಬಂದು ಸ್ಥಾನ ಅಲಂಕರಿಸುವ ಮುನ್ನ ಸದನದ ಜವಾಬ್ದಾರಿ ನಿಮ್ಮದಾಗಿರುತ್ತೆ. ಸದನದಲ್ಲಿ ಕೋರಂ ಆಗುವವರೆಗೂ ಸಭಾಪತಿಗಳು ಬರುವುದಿಲ್ಲ. ಸಭಾಪತಿಗಳ ಆಸನದಲ್ಲಿ ಬೆಲ್ ಆಗುವಾಗ ಯಾರು ಕುಳಿತುಕೊಂಡಿರಬಾರದು. ಇದ್ಯಾವುದೂ ನಿಮ್ಮ ಗಮನಕ್ಕೆ ಬರಲಿಲ್ಲವೇ..? ಅಥವಾ ಇದು ನಿಮಗೆ ಗೊತ್ತಿಲ್ಲವೇ..? ಎಂದು ಪ್ರಶ್ನಿಸಿದ್ದಾರೆ.
ವಿಧಾನಪರಿಷತ್ ಕಲಾಪದ ಲೈವ್ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ನೀವು ಕೂಡ ಉಪ-ಸಭಾಪತಿಗಳು ಬಂದು ಸ್ಥಾನದಲ್ಲಿ ಕುಳಿತಾಗ ಅನುವು ಮಾಡಿಕೊಟ್ಟಿರಬಾರದೇಕೆ ಎಂಬ ಅನುಮಾನ ಇದೆ ಎಂದು ಹೇಳಲಾಗಿದೆ.
ನಿಮಗೆ ಎಲ್ಲಾ ಗಮನಕ್ಕೆ ಬಂದಿದ್ದರೂ ಸುಮ್ಮನಿದ್ದಿದ್ದು ಏಕೆ..? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಶತಮಾನದ ಇತಿಹಾಸವುಳ್ಳ ವಿಧಾನ ಪರಿಷತ್ತಿನ ಗೌರವ, ಸಂಪ್ರದಾಯ ಹಾಗೂ ಪರಂಪರೆಗೆ ಅಂದು ಸದನದಲ್ಲಿ ನಡೆದ ಘಟನೆಗಳಿಂದ ಧಕ್ಕೆಯಾಗಿರುತ್ತದೆ ಹಾಗಾಗಿ ಈ ಬಗ್ಗೆ ಉತ್ತರ ನೀಡಿ ಎಂದು ತಿಳಿಸಲಾಗಿದೆ.
english summary….
Furor in LC: Show Cause notice issued to LC Secretary
Bengaluru, Dec. 18, 2020 (www.justkannada.in): Speaker of the Legislative Council Sri Pratapchandra Shetty has issued a show-cause notice to the Legislative Council Secretary concerning the recent incident of furor in the council.
It can be recalled here that the Karnataka Legislative Council had witnessed a furor on December 15. An incident of this intensity had never taken place in the history of the upper house in the State it is learned. He has also ordered to give a reply within 48 hours.
In the letter, he has questioned why did he remain silent despite seeing everything? The Karnataka Legislative Council had a clean history, and the recent incident had marred its reputation, and hence he has asked to reply.
Keywords: Furore in LC/ Karnataka Legislative Council/ Legislative Council Speaker/ Show Cause notice
key words : methodology-Riot-Secretary-Method-Council-
Showcase-notice