ಮೈಸೂರು,ಸೆಪ್ಟೆಂಬರ್,29,2020(www.justkannada.in) : “ಮೈಕ್ರೊವೇವ್ ಎನರ್ಜಿ ಪ್ರೇರಿತ ಸಾವಯವ ಸಂಶ್ಲೇಷಣೆ ತಂತ್ರಜ್ಞಾನವು ವಿಷಕಾರಿ ರಾಸಾಯನಿಕಗಳ ಬಳಕೆ ಮತ್ತು ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ಸಾವಯವ ರಸಾಯನಶಾಸ್ತ್ರ ಹಾಗೂ ಆಂಟನ್ ಪಾರ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ‘’ಮೈಕ್ರೊವೇವ್ ಸಂಶ್ಲೇಷಣೆಗಾಗಿ ಆಂಟನ್ ಪಾರ್ ಪರಿಹಾರಗಳು’’ ವಿಷಯ ಕುರಿತ ವೆಬಿನಾರ್ ಉದ್ಘಾಟಿಸಿ ಅವರು ಮಾತನಾಡಿದರು.
ಮೈಕ್ರೊವೇವ್ ಎನರ್ಜಿ ಪ್ರೇರಿತ ಸಾವಯವ ಸಂಶ್ಲೇಷಣೆ ತಂತ್ರಜ್ಞಾನವು ಉತ್ಪನ್ನದ ಇಳುವರಿ, ಶುದ್ಧತೆ, ಇಂಧನ ಬಳಕೆ ಮತ್ತು ನಂತರದ ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದಾಗ ಸಂಶ್ಲೇಷಿತ ಕಾರ್ಯವಿಧಾನಗಳು ಉಪಯುಕ್ತವಾಗಿವೆ ಎಂದು ತಿಳಿಸಿದರು.
ಆಂಟನ್ ಪಾರ್ ಇಂಡಿಯಾ ಲಿಮಿಟೆಡ್ ನ ತಾಂತ್ರಿಕ ಕಾರ್ಯನಿರ್ವಾಹಕಾಧಿಕಾರಿ ಅಮೃಶ್ ಡೇವ್ ಅವರು ‘’ಮೈಕ್ರೋವೆವ್ ಬಳಕೆ’’ಯ ಬಗ್ಗೆ ತಾಂತ್ರಿಕ ಉಪನ್ಯಾಸ ನೀಡಿದರು.
ಆಂಟನ್ ಪಾರ್ ಉಪಕರಣಗಳನ್ನು ಬಳಸುವ ಸಂಶ್ಲೇಷಣೆ. ವೆಬಿನಾರ್ ನಲ್ಲಿ ಸುಮಾರು 400 ಮಂದಿ ಆನ್ ಲೈನ್ ಮೂಲಕ ಪಾಲ್ಗೊಂಡಿದ್ದರು.
ಮೈಸೂರುವಿವಿ ಉಪ ಕುಲಸಚಿವ ಡಾ.ಸದಾಶಿವ, ಸಾವಯವ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷ ಬಸಪ್ಪ, ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಮಂಟೆಲಿಂಗು, ಡಾ. ಕೆ.ಎಚ್.ನರಸಿಂಹ ಮೂರ್ತಿ. ಡಾ.ಬಿ.ಎಸ್.ಪ್ರಿಯಾ, ವಿಜ್ಞಾನ ಭವನ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಸ್.ಚಂದ್ರ ನಾಯಕ್ ಉಪಸ್ಥಿತರಿದ್ದರು.
key words : Microwave-energy-induced-organic-synthesis-technology-beneficial-Prof.K.S.Rangappa