ಬೆಂಗಳೂರು,ಮಾರ್ಚ್,31,2025 (www.justkannada.in): ರಾಜ್ಯ ಸರ್ಕಾರ ಇತ್ತೀಚೆಗೆ ಹಾಲು ಮತ್ತು ಮೊಸರಿನ ದರವನ್ನ 4 ರೂಪಾಯಿ ಹೆಚ್ಚಳ ಮಾಡಿದ್ದು, ನಾಳೆಯಿಂದಲೇ ರಾಜ್ಯಾದ್ಯಂತ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ಪ್ರತಿ ಲೀಟರ್ 4 ರೂ.ಹೆಚ್ಚಾಗಲಿದ್ದು ಪರಿಷ್ಕೃತ ದರ ಜಾರಿಯಾಗಲಿದೆ.
ಹಾಲು ಒಕ್ಕೂಟ ಹಾಗೂ ರೈತರಿಂದ ಹಾಲು ದರ ಹೆಚ್ಚಳಕ್ಕೆ ಬೇಡಿಕೆ ನಿರಂತವಾಗಿ ಹೆಚ್ಚಿದ ಹಿನ್ನೆಲೆ ಪ್ರತಿ ಲೀಟರ್ ಹಾಲಿನ ದರ ಮತ್ತು ಮೊಸರಿನ ದರವನ್ನು 4ರೂ. ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದ್ದು ನಾಳೆಯಿಂದ ದರ ಜಾರಿಗೆ ಬರಲಿದೆ. ಈ ಮೂಲಕ ಜನ ಸಾಮಾನ್ಯರಿಗೆ ಹಾಲಿನ ದರ ಏರಿಕೆಯ ಬರೆ ಬೀಳಲಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಹಾಲಿನ ದರ ಏರಿಕೆಯ ಬಿಸಿ ತಟ್ಟಲಿದೆ. ಬಸ್, ಮೆಟ್ರೋ, ವಿದ್ಯುತ್ ಬಳಿಕ ಕೆಎಂಎಫ್ ನಂದಿನಿ ಹಾಲಿನ ದರ ಏರಿಕೆ ದೊಡ್ಡ ಹೊರೆಯಾಗಿದೆ. ರೈತರಿಗೆ ಇದರಿಂದ ಅನುಕೂಲವಾದರೂ ಗ್ರಾಹಕರಿಗೆ ಇದೊಂದು ಬರೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
Key words: milk price, 4 Rs., hike, tomorrow