ಹಾಲಿನ ದರ ಹೆಚ್ಚಳದ ಬಗ್ಗೆ ಸಿಎಂ ಸುಳಿವು: ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

ಹುಬ್ಬಳ್ಳಿ,ಸೆಪ್ಟಂಬರ್,14,2024 (www.justkannada.in):  ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಳ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,   ಕಾಂಗ್ರೆಸ್ ಅಂದರೆ ಕಳ್ಳರ ಪಾರ್ಟಿ ಈ ಹಿಂದೆ ಯಾಕೆ ಹಾಲಿನ ದರವನ್ನ ಹೆಚ್ಚಳ ಮಾಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಪ್ರೋತ್ಸಾಹ ಧನ ಕೊಡಲಿಲ್ಲ.  ರೈತರ ಕಾರಣ ಹೇಳಿ ಈಗ ಹಾಲಿನ ದರ ಹೆಚ್ಚಳ ಮಾಡತ್ತಿದ್ದಾರೆ.  ಈ ಹಣವನ್ನ ರೈತರಿಗೆ ಕೊಡುತ್ತಾರೋ ಇಲ್ಲವೋ ಡೌಟು ನಾವು ಭವಿಷ್ಯ ಹೇಳ್ತಿನಿ.  ಇದು ಎರಡು ತಿಂಗಳು ಮಾತ್ರ ಅಮೇಲೆ ಬಂದ್ ಆಗುತ್ತದೆ ಎಂದರು.

ನಾಗಮಂಗಲ ಗಲಭೆ ಕೇಸ್ ನಲ್ಲಿ ಗಣೇಶ ಕೂರಿಸಿದವರನ್ನೇ ಎ1 ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ನಾಚಿಕೆ ಮಾನ ಮರ್ಯಾದೆ ಇಲ್ಲದ ಸರ್ಕಾರವಿದು. ಎಸ್ ಪಿಗೆ ಮಾನ ಮರ್ಯಾದೆ ಇದೆಯಾ ಗೃಹಸಚಿವರಿಗೆ ಏನಾಗಿದೆ.  ನಿವೇನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ..? ಎಂದು ವಾಗ್ದಾಳಿ ನಡೆಸಿದರು.

Key words: Milk Price, Hike, Govt, Decision, Union Minister, Prahlad Joshi