ಮೈಸೂರು,ಮಾರ್ಚ್,31,2022(www.justkannada.in): ಮೈಸೂರಿನ ದೀಪಾ ಶಿಕ್ಷಣ ಮತ್ತು ಸೇವಾ ಸಂಸ್ಥೆ ದೀಪಾ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನರ್ಸರಿ ವಿದ್ಯಾರ್ಥಿಗಳಿಗಾಗಿ ಮಿನಿ ಘಟಿಕೋತ್ಸವ (Mini Convocation) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಅಮೃತ ಕೃಪ ಆಸ್ಪತ್ರೆಯ ವೈದ್ಯೆ ಡಾ. ಸೌಮ್ಯ.ಬಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿಸವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮಕ್ಕಳು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಠಿಕ ಆಹಾರ ತೆಗೆದುಕೊಳ್ಳಬೇಕಾದ ಕುರಿತು, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಶಿಸ್ತಿನ ಕ್ರಮಗಳನ್ನು ತಿಳಿಸುತ್ತಾ ,ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರವನ್ನು ತಿಳಿಸಿ, ಮಕ್ಕಳ ಎದರು ಪೋಷಕರ ವರ್ತನೆ ಹೇಗಿರಬೇಕೆಂದು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ದೀಪಾ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷ ರಾಮಪ್ಪ.ಎಂ, ಉಪಾಧ್ಯಾಕ್ಷ ಸುಂದರ್, ಕಾರ್ಯದರ್ಶಿ ಗಳಾದ ಸುಬ್ಬರಾವ್, ನಿರ್ದೇಶಕಿ ಡಾ.ನಿವೇದಿತಾ ದೀಪಕ್ ಸುವರ್ಣ, ದೀಪಾ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಪ್ರಣೀತಾ ಎರ್ಮಾಳ್ , ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಗೀತಾ.ಹೆಚ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸವಿತಾ.ಬಿ ಮತ್ತು ಶಿಕ್ಷಕರು , ಚಿಣ್ಣರು ಮತ್ತು ಅವರ ಪೋಷಕರು ಹಾಜರಿದ್ದರು. ಯು.ಕೆ.ಜಿ ವಿದ್ಯಾರ್ಥಿಗಳಿಗೆ ಘಟಿಕೋತ್ಸವದ ಪ್ರಮಾಣ ಪತ್ರವನ್ನು ವಿತರಿಸಿದರು.
Key words: Mini Convention – Deepa Education & Service Institute-mysore