ಮೈಸೂರು,ಜನವರಿ,19, 2021(www.justkannada.in) : ಭತ್ತ ಯಾವಾಗ ನಾಟಿ ಮಾಡುತ್ತಾರೆ ಎಂಬ ಸಾಮಾನ್ಯ ಜ್ಞಾನವು ಸರ್ಕಾರಕ್ಕೆ ಇಲ್ಲ. ರಾಜಕಾರಣಿಗಳು ಏನು ಆಕಾಶದಿಂದ ಇಳಿದಿದ್ದಾರ, ಏಕೆ ಕೈ ಮುಗಿದು ನಿಂತುಕೊಳ್ಳಬೇಕು ಎಂದು ರೈತ ಮುಖಂಡ ಹೊಸಕೋಟೆ ಬಸವರಾಜು ಆಕ್ರೋಶವ್ಯಕ್ತಪಡಿಸಿದ್ದಾರೆ.
ಮೈಸೂರಿಗೆ ಆಗಮಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ರೈತರು ಭೇಟಿ ಮಾಡಿ ಸಮಸ್ಯೆಗಳನ್ನು ವಿವರಿಸುವ ಸಂದರ್ಭ ಸಚಿವ ಬಿ.ಸಿ.ಪಾಟೀಲ್ ಸರ್ಕಾರಕ್ಕೆ ಜವಾಬ್ದಾರಿಯಿಲ್ಲ ಎನ್ನುವುದು ಅಕ್ಷಮ್ಯ ಅಪರಾಧ ತೊಲಗಿ ಇಲ್ಲಿಂದ ಎಂದು ರೈತರ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.
ಇದಕ್ಕೆ ರೈತ ಮುಖಂಡ ಬಸವರಾಜು ಪ್ರತಿಕ್ರಿಯಿಸಿ, ಕೃಷಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಾಮಾನ್ಯ ಜ್ಞಾನವಿಲ್ಲ. ನೀವು ತಿಂದು ಮಜಾ ಮಾಡುತ್ತಿರುವುದು ರೈತರ ಅನ್ನ. ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
key words : Minister-Agriculture-statement-Farmer-leader- Basavaraju-Outrage