ಬೆಂಗಳೂರು,ಆಗಸ್ಟ್,8,2021(www.justkannada.in): ಸಚಿವ ಸಂಪುಟ ರಚನೆಯಾದ ಬಳಿಕ ನಿನ್ನೆ ನೂತನ ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಖಾತೆಗಳನ್ನ ಹಂಚಿಕೆ ಮಾಡಿದ್ದಾರೆ. ಆದರೆ ತಾವು ನಿರೀಕ್ಷಿಸಿದ ಖಾತೆ ಸಿಗದ ಹಿನ್ನೆಲೆ ಸಚಿವ ಆನಂದ್ ಸಿಂಗ್ ಮತ್ತು ಎಂಟಿಬಿ ನಾಗಾರಾಜ್ ಅಸಮಾಧಾನಗೊಂಡಿದ್ದಾರೆ.
ಇದೇ ವಿಚಾರವಾಗಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಚಿವ ಆನಂದ್ ಸಿಂಗ್ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಆರ್.ಟಿ.ನಗರದ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಆನಂದ್ ಸಿಂಗ್ ಭೇಟಿ ಮಾಡಿ ಚರ್ಚಿಸಿ ಅಲ್ಲಿಂದ ತೆರಳಿದ್ದಾರೆ. ಆದರೆ ಸಚಿವ ಆನಂದ್ ಸಿಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸದೆ ತೆರಳಿದ್ದು, ಇನ್ನು ಅಸಮಾಧಾನ ಮುಂದುವರೆದಿದೆ ಎನ್ನಲಾಗಿದೆ.
ಖಾತೆಯ ಬಗ್ಗೆ ಆನಂದ್ ಸಿಂಗ್ ನಿನ್ನೆಯಷ್ಟೇ ಅಸಮಧಾನ ವ್ಯಕ್ತಪಡಿಸಿದ್ದರು. ಇಂದು ಮುಖ್ಯಮಂತ್ರಿಯನ್ನು ಭೇಟಿಯಾಗಿರುವ ಅವರು ಖಾತೆ ಬದಲಿಸುವಂತೆ ಮನವಿ ಮಾಡಿದ್ದಾರೆ. ಕುಟುಂಬ ಸಮೇತ ಬಂದು ಸಿಎಂ ಭೇಟಿಯಾಗಿ ಖಾತೆ ಬದಲಾವಣೆ ಬಗ್ಗೆ ಮನವಿ ಮಾಡಿರುವ ಅನಂದ್ ಸಿಂಗ್, ಭೇಟಿ ನಂತರ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋಗಿದ್ದಾರೆ.
ENGLISH SUMMARY…
Displeasure on distribution of portfolios: Minister Anand Singh returns without responding to media after meeting CM
Bengaluru, August 8, 2021 (www.justkannada.in): Chief Minister Basavaraj Bommain allocated the portfolios to the newly appointed ministers yesterday. However, Ministers Anand Singh and MTB Nagaraj appeared to be not satisfied with the distribution of portfolios.
Minister Anand Singh met Chief Minister Basavaraj Bommai over this matter today at the formers R.T. Nagar’s residence in Bengaluru. However, he refused to respond to the media after he met the Chief Minister.
Anand Singh had expressed his displeasure over the distribution of portfolio. It is learnt that he met the Chief Minister today and appealed to change his portfolio. He visited the CM’s residence, along with his family members. But returned without replying to the media queries.
Keywords: Minister Anand Singh/ Chief Minister/ RT Nagar residence/ meet/ discussion/ displeasure
Key words: minister-Anand Singh- met- CM –basavaraja bommai-change-department