ಬೆಳಗಾವಿ,ಡಿಸೆಂಬರ್,24,2022(www.justkannada.in): ಅವಧಿಗೂ ಮುನ್ನ ಚುನಾವಣೆ ನಡೆಸಲು ಹುನ್ನಾರ ನಡೆಸಲಾಗುತ್ತದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಚುನಾವಣೆ ನಿಗದಿ ಮಾಡೋದು ಎಲೆಕ್ಷನ್ ಕಮಿಷನ್. ಡಿಕೆ ಶಿವಕುಮಾರ್ ಹಿರಿಯ ಮತ್ತು ಅನುಭವಿ ರಾಜಕಾರಣಿ. ಏನಿದ್ದರೂ ಚುನಾವಣಾ ಆಯೋಗಕ್ಕೆ ದೂರು ನೀಡಲಿ. ಡಿಕೆಶಿಯೇ ಎಲೆಕ್ಷನ್ ಕಮಿಷನ್ ಅಂದ್ರೆ ಕಷ್ಟ ಎಂದು ಲೇವಡಿ ಮಾಡಿದರು.
ಭಾರತ್ ಜೋಡೋ ಮತ್ತು ಪಂಚರತ್ನ ಯಾತ್ರೆ ನಿಲ್ಲಿಸಲು ಕೋವಿಡ್ ನೆಪ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ಅಶ್ವಥ್ ನಾರಾಯಣ್, ಜನರಿಗೆ ಏನಾದರೂ ಸರಿ ನಮಗೇನು ಅನ್ನೋಕೆ ಆಗುತ್ತಾ..? ಎಲ್ಲರನ್ನೂವಿಶ್ವಾಸಕ್ಕೆ ತೆಗೆದುಕೊಂಡು ಮಾರ್ಗಸೂಚಿ ಹೊರಡಿಸುತ್ತೇವೆ. ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸಬೇಕು. ಯಾರು ಏನೇ ಯಾತ್ರೆ ಮಾಡಿದರೂ ನಿಶ್ಚಯಿಸೋದು ಜನರು ಎಂದು ಹೇಳಿದರು.
Key words: Minister -Aswath Narayan – DK Shiva kumar -accusation – premature -election