ಬೆಂಗಳೂರು,ಫೆಬ್ರವರಿ,9,2022(www.justkannada.in): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನ ಹೈಕೋರ್ಟ್ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದ್ದು ಈ ಹಿನ್ನೆಲೆಯಲ್ಲಿ ತೀರ್ಪು ಬರೋವರೆಗೂ ನಿಯಮಪಾಲಿಸಿ ಕಾಲೇಜಿಗೆ ಬನ್ನಿ ಎಂದು ವಿದ್ಯಾರ್ಥಿಗಳ ಬಳಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಮನವಿ ಮಾಡಿದ್ದಾರೆ.
ಹಿಜಾಬ್ ವಿವಾದ ಕುರಿತು ಮಾತನಾಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ವಿದ್ಯಾರ್ಥಿನೀಯರು ಪ್ರಚೋದನೆಗೆ ಒಳಗಾಗಿದ್ದಾರೆ. ಕುರಾನ್ ನಂತೆ ಕೆಲ ಸಬ್ಜೆಕ್ಟ್ ಬೇಡ ಅಂದ್ರೆ, ಶುಕ್ರವಾರ ಎಕ್ಸಾಂ ಬೇಡ ಅಂದ್ರೆ ಅದನ್ನ ಆ ರೀತಿ ಮಾಡಲು ಸಾಧ್ಯವಾ..? ಎಂದು ಪ್ರಶ್ನಿಸಿದರು.
ಅಂತಿಮ ತೀರ್ಪಿನ ಬಳಿಕ ಸರ್ಕಾರದ ನಿರ್ಧಾರ ಪ್ರಕಟ ಮಾಡುತ್ತೇವೆ. ಕೋರ್ಟ್ ಯಾವುದೇ ಮಧ್ಯಂತರ ಆದೇಶ ನೀಡಿಲ್ಲ . ಸರ್ಕಾರದ ಸುತ್ತೋಲೆ ಈಗಲೂ ಜಾರಿಯಲ್ಲಿದೆ. ರಜೆ ಮುಂದುವರೆಸುವ ಬಗ್ಗೆ ಇಂದು ನಿರ್ಧಾರ ಮಾಡಲ್ಲ. ಸಿಎಂ, ಗೃಹ ಸಚಿವರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
Key words: minister-BC Nagesh-hijab- Controversy