ಬೆಂಗಳೂರು,ಫೆ,2020(www.justkannada.in): ನಿನ್ನೆ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವ ಬಿ.ಸಿ ಪಾಟೀಲ್ ಈ ಬೆನ್ನಲ್ಲೆ ಇದೀಗ ಮಾಜಿ ಸಿಎಂಗಳಾದ ಸಿದ್ಧರಾಮಯ್ಯ ಮತ್ತು ಹೆಚ್.ಡಿ ಕುಮಾರಸ್ವಾಮಿ ಕಾಲೆಳೆದಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ ಅವರನ್ನ ಆಕಸ್ಮಿಕ ಮುಖ್ಯಮಂತ್ರಿ. ಸಿದ್ಧರಾಮಯ್ಯ ಬಳಿ ನಕಲಿ ವಕೀಲ ಸರ್ಟಿಫಿಕೇಟ್ ಇರಬಹುದು ಎಂದು ಸಚಿವ ಬಿ.ಸಿ ಪಾಟೀಲ್ ಲೇವಡಿ ಮಾಡಿದ್ದಾರೆ.
ವಿಕಾಸಸೌಧದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ಹೆಚ್.ಡಿ.ಕುಮಾರಸ್ವಾಮಿ ಆಕಸ್ಮಿಕ ಮುಖ್ಯಮಂತ್ರಿ, ಪ್ರತಿ 10 ವರ್ಷಕ್ಕೊಮ್ಮೆ ಲಾಟರಿ ಹೊಡೆಯುತ್ತೆ. ಕುಮಾರಸ್ವಾಮಿ ಅವರು ಬಿಜೆಪಿ ಶಾಸಕರ ಬಗ್ಗೆ ತಲೆಕೆಡಸಿಕೊಳ್ಳುವುದು ಬೇಡ, ಜೆಡಿಎಸ್ ಶಾಸಕರನ್ನು ಉಳಿಸಿಕೊಳ್ಳುವುದರತ್ತ ಯೋಚಿಸಬೇಕು ಎಂದು ಕುಟುಕಿದರು.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯಗೂ ಟಾಂಗ್ ಕೊಟ್ಟ ಸಚಿವ ಬಿ.ಸಿ ಪಾಟೀಲ್, ಸಿಎಂ ಸಿದ್ದರಾಮಯ್ಯ ಯಾವ ರೀತಿ ವಕೀಲರಾದ್ರೋ ಗೊತ್ತಿಲ್ಲ, ಸಿದ್ದರಾಮಯ್ಯ ಬಳಿ ನಕಲಿ ವಕೀಲ ಸರ್ಟಿಫಿಕೇಟ್ ಇರಬಹುದು. ಜನತಾ ನ್ಯಾಯಾಲಯದಲ್ಲಿ ನಮ್ಮ ಪರ ತೀರ್ಪು ಬಂದಿದೆ, ಜನರು ಮತ್ತೆ ನಮ್ಮನ್ನು ಗೆಲ್ಲಿಸಿದ್ದಾರೆ, ಆದರೆ ಸಿದ್ದರಾಮಯ್ಯ ಈ ಬಗ್ಗೆ ಅಪಸ್ವರ ಎತ್ತಿದ್ದಾರೆ. , ಇವರು ಹೇಗೆ ವಕೀಲರಾದರೂ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
Key words: minister- BC Patil-Former CM -Siddaramaiah –hd kumaraswamy