ಮೈಸೂರು,ಜೂನ್,15,2021(www.justkannada.in): 17 ಜನ ಹೊರಗಿನಿಂದ ಬಂದಿದ್ದರಿಂದ ಸಮಸ್ಯೆ ಆಗಿದೆ ಎಂದು ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಬಿ.ಸಿ ಪಾಟೀಲ್, 17 ಜನ ಬಿಜೆಪಿಗೆ ಬಂದ ಕಾರಣದಿಂದ ಸರ್ಕಾರ ಬಂದಿದೆ. ಸರ್ಕಾರ ಬಂದಿರುವ ಕಾರಣ ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾರೆ. ಈಶ್ವರಪ್ಪ ಆ ರೀತಿ ಕೊಟ್ಟಿದ್ದರೆ ಇದು ಸರಿಯಲ್ಲ. ಅವರು ಆ ರೀತಿ ಮಾತನಾಡಿಲ್ಲ ಎಂದುಕೊಳ್ಳುತ್ತೇನೆ ಎಂದು ಹೇಳಿದರು.
ಕೆಲವರು ನಾಯಕತ್ವ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳಿಗೂ ನಾಳೆ ತೆರೆ ಬೀಳಲಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬರುತ್ತಿದ್ದಾರೆ. ಇವರು ಎಲ್ಲರಿಗೂ ತಿಳಿ ಹೇಳಲಿದ್ದಾರೆ. ಪಕ್ಷದಲ್ಲಿ ಗೊಂದಲಗಳಿದ್ದರೆ ಅದನ್ನ ಆಂತರಿಕವಾಗಿ ಬಗೆಹರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅರುಣ್ ಸಿಂಗ್ ಸೂಚನೆ ನೀಡಲಿದ್ದಾರೆ. ನಾಳೆ ಇದಕ್ಕೆಲ್ಲ ಅಂತಿಮ ತೆರೆ ಬೀಳುವ ಸಾಧ್ಯತೆ ಇದೆ ಎಂದು ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.
ಶಾಸಕ ಮುನಿರತ್ನ ಸಚಿವರಾಗುತ್ತಾರೆ ಎಂಬ ವಿ.ಸೋಮಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಶಾಸಕ ಮುನಿರತ್ನ ಪರ ಬ್ಯಾಟ್ ಬೀಸಿದ ಸಚಿವ ಬಿ.ಸಿ.ಪಾಟೀಲ್ , ಶಾಸಕ ಮುನಿರತ್ನ ಕೂಡ ಸಚಿವರಾಗಬೇಕು. ಸರ್ಕಾರ ಅಧಿಕಾರ ಬರಲು ಅವರ ತ್ಯಾಗವೂ ಇದೆ ಎಂದರು.
ಇದೇ ವೇಳೆ ಅಲ್ಲೇ ಇದ್ದ ಸಚಿವ ಎಸ್.ಟಿ ಸೋಮಶೇಖರ್, ಶಾಸಕ ಮುನಿರತ್ನರಿಗೆ ಸಚಿವ ಸ್ಥಾನದ = ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ಹೊರಟರು. ಮಾಧ್ಯಮದವರ ಎರಡೆರಡು ಬಾರಿ ಪ್ರಶ್ನೆಗೂ ಯಾವುದೇ ಪ್ರತಿಕ್ರಿಯೆ ಕೊಡದೆ ಅಲ್ಲಿಂದ ತೆರಳಿದರು.
ಈ ವೇಳೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ.ಪಾಟೀಲ್ , ನನಗೆ ಈ ವಿಚಾರ ಗೊತ್ತಿಲ್ಲ. ಆದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದಾರೆ. ಅವರಿಗು ಸಚಿವ ಸ್ಥಾನ ಸಿಗಬೇಕಿದೆ ಎಂದರು.
Key words: Minister -BC Patil – KS Eshwarappa- statement.