ಮೈಸೂರು,ಫೆಬ್ರವರಿ,21,2025 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹರಕೆ ತೀರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಮೈಸೂರಿನ ಚಾಮುಂಡಿಬೆಟ್ಟ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಭೇಟಿ ನೀಡುತ್ತಿದ್ದು, ಮುಡಾ ಹಗರಣದಿಂದ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಹಿನ್ನೆಲೆ ಸಚಿವ ಭೈರತಿ ಸುರೇಶ್ ಹರಕೆ ಕಟ್ಟಿಕೊಂಡಿದ್ದಾರೆಯೇ ಎನ್ನಲಾಗಿತ್ತು.
ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ ಪ್ರಕರಣದಲ್ಲಿ ಸಿಲುಕಿದ್ದರು. ಹೀಗಾಗಿ ಮೊದಲ ದಿನದಿಂದಲೂ ಸಚಿವ ಭೈರತಿ ಸುರೇಶ್ ಮೇಲೆ ಹಲವರು ಬೊಟ್ಟು ಮಾಡಿದ್ದರು. ಭೈರತಿ ಸುರೇಶ್ ಅವರಿಂದಲೇ ಸಿಎಂಗೆ ಕಂಟಕ ಬಂದಿದೆ ಅಂತ ಮಾತನಾಡಿಕೊಳ್ಳುತ್ತಿದ್ದರು.
ಇದೀಗ ಒಂದೆಡೆ ಲೋಕಾಯುಕ್ತದಲ್ಲಿ ಕ್ಲೀನ್ ಚಿಟ್, ಮತ್ತೊಂದೆಡೆ ಸಿಬಿಐಗೆ ಪ್ರಕರಣ ವರ್ಗಾವಣೆ ಬೇಡ ಎಂದು ನ್ಯಾಯಾಲಯ ಆದೇಶಿಸಿದ್ದು ಹೀಗಾಗಿ ಸಿಎಂ ಸಿದ್ದರಾಮಯ್ಯ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಈ ಹಿನ್ನೆಲೆ ಭೈರತಿ ಸುರೇಶ್ ಕೂಡ ನಿರಾಳರಾಗಿದ್ದು ಇದೀಗ ಹರಕೆ ತೀರಿಸಲು ಚಾಮುಂಡಿ ಬೆಟ್ಟ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
Key words: Relief, CM Siddaramaiah , Muda case, minister m Bhairathi suresh