ಬಿಜೆಪಿಗೆ ಪ್ರತಿಭಟನೆ ಮಾಢುವ ನೈತಿಕತೆ ಇಲ್ಲ- ಸಚಿವ ಭೈರತಿ ಸುರೇಶ್

ಬೆಂಗಳೂರು,ಏಪ್ರಿಲ್,5,2025 (www.justkannada.in):  ಬೆಲೆ ಏರಿಕೆ ವಿರೋಧಿಸಿ  ಬಿಜೆಪಿ ಪ್ರತಿಭಟನೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಭೈರತಿ ಸುರೇಶ್,  ಬಿಜೆಪಿಗೆ ಪ್ರತಿಭಟನೆ ಮಾಢುವ ನೈತಿಕತೆ ಇಲ್ಲ. ಕೇಂದ್ರ ಸರ್ಕಾರ ಪೆಟ್ರೋಲ್, ರೈಲ್ವೆ ಟಿಕೆಟ್ ಬೆಲೆ ಏರಿಕೆ ಮಾಡಿದೆ.  ಹೀಗಾಗಿ ಕೇಂದ್ರ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ ಮಾಡಲಿ ಬಿಜೆಪಿಯವರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುವ ಅನುದಾನವನ್ನ ಕೊಡಿಸಲಿ ಎಂದು ವಾಗ್ದಾಳಿ ನಡೆಸಿದರು.

ಕ್ಷುಲ್ಲಕ ಕಾರಣಗಳಿಗೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.  ಸಿದ್ದರಾಮಯ್ಯ ಆಡಳಿತ  ಉತ್ತಮವಾಗಿದೆ ಜಾತಿಗಳ ಮಧ್ಯೆ ಜಗಳ ಹಚ್ಚುವುದು ಬಿಜೆಪಿಯವರ ಕೆಲಸ ಎಂದು ಸಚಿವ  ಭೈರತಿ ಸುರೇಶ್  ಹರಿಹಾಯ್ದರು.

Key words: BJP, no morals, protest, Minister, Bhairati Suresh