ಮೈಸೂರು,ಜ,1,2020(www.justkannada.in): ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಅರಣ್ಯ ಖಾತೆ ಸಚಿವ ಸಿ.ಸಿ ಪಾಟೀಲ್ ಭೇಟಿ ನೀಡಿ ಪಶ್ಚಿಮ ಹೂಲಕ್ ಗಿಬ್ಬನ್ ಜೋಡಿಯನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿದರು.
ಇತ್ತೀಚೆಗೆ ಪ್ರಾಣಿ ವಿನಿಮಯ ಯೋಜನೆಯಡಿ ಅಸ್ಸಾಂನಿಂದ ಮೈಸೂರು ಮೃಗಾಲಯಕ್ಕೆ ಪಶ್ಚಿಮ ಹೂಲಕ್ ಗಿಬ್ಬನ್ ಜೋಡಿಯನ್ನ ತರಲಾಗಿತ್ತು. ಹೊಸ ವರ್ಷದ ಮೊದಲ ದಿನ ಕಿಕ್ಕಿರಿದು ತುಂಬಿದ್ದ ಪ್ರವಾಸಿಗರ ವೀಕ್ಷಣೆಗೆ ಅನುವಾಗುವಂತೆ ಗಿಬ್ಬನ್ ಜೋಡಿ ವೀಕ್ಷಣೆಗೆ ಅರಣ್ಯ ಸಚಿವ ಸಿ.ಸಿ ಪಾಟೀಲ್ ಮುಕ್ತಗೊಳಿಸಿದರು.
ಪ್ರಾಣಿ ಮನೆಯಿಂದ ಹೊರ ಬರುತ್ತಿದ್ದಂತೆ ಗಿಬ್ಬನ್ ಗಳು ವೀಕ್ಷಕರ ಗಮನ ಸೆಳೆದವು. ಮೃಗಾಲಯ ವೀಕ್ಷಣೆಗೆ ಬರುತ್ತಿರುವ ಪ್ರವಾಸಿಗರನ್ನ ಗಿಬ್ಬನ್ ಗಳು ತಮ್ಮ ತುಂಟಾಟಗಳ ಮೂಲಕ ರಂಜಿಸುತ್ತಿವೆ.
key words: Minister -CC Patil -visits -Chamarajendra Zoo – Mysore-Hulan Gibbon