ಬಸ್ ಪ್ರಯಾಣ ದರ ಏರಿಕೆಗೆ ಸಚಿವ ಚಲುವರಾಯಸ್ವಾಮಿ ಸಮರ್ಥನೆ

ಮಂಡ್ಯ, ಜನವರಿ, 3, 2025 (www.justkannada.in):   ಜನವರಿ 5 ರಿಂದ ರಾಜ್ಯದಲ್ಲಿ ಬಸ್ ಪ್ರಯಾಣ ದರ ಶೇ 15 ರಷ್ಟು ಏರಿಕೆಗೆ ತೀರ್ಮಾನಿಸಿರುವುದಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಬಸ್ ದರ ಹೆಚ್ಚಳ ಮಾಡಿ 10 ವರ್ಷ ಆಗಿದೆ ಮಟನ್, ಬೇಳೆ ರೇಟ್ ಹೆಚ್ಚಿಸಿದರೇ ತೆಗೆದುಕೊಳ್ಳುತ್ತೀರಾ.  ಆಂಧ್ರ ಮತ್ತು  ತಮಿಳುನಾಡನಲ್ಲಿ ಬಸ್ ಪ್ರಯಾಣ ದರ ಹೆಚ್ಚಿದೆ.  ರಾಜ್ಯದಲ್ಲಿ10 ವರ್ಷದಿಂದ ಬಸ್ ಪ್ರಯಾಣ ದರ ಪರಿಷ್ಕರಣೆ ಆಗಿಲ್ಲ.  ದರ ಹೆಚ್ಚಳಕ್ಕೂ ಗ್ಯಾರಂಟಿಗೂ ಸಂಬಂಧವಿಲ್ಲ ಎಂದರು.

ಸಂಕ್ರಾತಿ ಬಳಿಕ ಸರ್ಕಾರ  ಉಳಿಯುವುದಿಲ್ಲ ಎಂಬ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ಕೊಟ್ಟ ಸಚಿವ ಚಲುವರಾಯಸ್ವಾಮಿ,  ಹೆಚ್ ಡಿಕೆ  ಕೇಳಿ ನಾವು ಸರ್ಕಾರ ಮಾಡಲು ಆಗುತ್ತಾ? ಹೆಚ್ ಡಿಕೆ ತೀರ್ಮಾನ ನಮಗೆ ಬೇಕಿಲ್ಲ. ನಮ್ಮ ಸರ್ಕಾರದ ಬಗ್ಗೆ ಜನ ಮಾತನಾಡುತ್ತಾರೆ ಎಂದರು.

Key words: Minister, Chaluvarayaswamy, justifies, increase, bus fares