ಬೆಂಗಳೂರು,ಜನವರಿ,28,2025 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿಗೆ ಹಾಗೂ ಸಚಿವ ಭೈರತಿ ಸುರೇಶ್ ಗೆ ಇಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಸಚಿವ ಚಲುವರಾಯಸ್ವಾಮಿ, 50:50 ಅನುಪಾತದಲ್ಲಿ ಸೈಟ್ ಹಂಚಿಕೆಯಾಗಿದೆ. ಬಿಜೆಪಿ ಅವಧಿಯಲ್ಲೇ ಸೈಟ್ ಹಂಚಿಕೆಯಾಗಿದೆ. ತನಿಖೆ ಆದರೆ ಬಿಜೆಪಿ ಅವಧಿಯ ತನಿಖೆಯಾಗಿದೆ. ಹೀಗಾಗಿ ನಮಗೆ ಆತಂಕ ಇಲ್ಲ. ಸಿಎಂ ಸಿದ್ದರಾಮಯ್ಯ ಪತ್ನಿ ಸೈಟ್ ವಾಪಸ್ ನೀಡಿದ್ದಾರೆ ಇಡಿ ನೋಟಿಸ್ ರಾಜಕೀಯ ಪ್ರೇರಿತವಾದುದು. ಸಿದ್ದರಾಮಯ್ಯ ಅವರ ಮೇಲೆ ಒಂದು ಕಪ್ಪು ಚುಕ್ಕೆ ಇಲ್ಲ ಕಾಂಗ್ರೆಸ್ ಸಮರ್ಥ ಆಡಳಿತ ನಡೆಸುತ್ತಿದೆ. ಹೀಗಾಗಿ ಬಿಜೆಪಿಗೆ ಸಹಿಸಲು ಆಗುತ್ತಿಲ್ಲ ಎಂದರು.
ನಾವು ಸತತ ಮೂರು ಚುನಾವಣೆ ಗೆದ್ದಿದ್ದೇವೆ. ಮುಂದೆ 2028ಕ್ಕೂ ನಮ್ಮದೇ ಸರ್ಕಾರ ಬರಲಿದೆ. ಯಾವುದೇ ತೀರ್ಮಾನ ಆದರೂ ಅದು ಹೈಕಮಾಂಡ್ ತೀರ್ಮಾನ ಅಂತಿಮ ಸಿಎಂ ಡಿಸಿಎಂ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾವು ಮಾತನಾಡುವುದು ನಮ್ಮಲ್ಲಿ ಮಾತ್ರ . ಬಿಜೆಪಿಯಲ್ಲಿ ಇರುವಷ್ಟು ಗೊಂದಲ ನಮ್ಮಲ್ಲಿ ಇಲ್ಲ ಎಂದರು.
Key words: ED, notice, politically, motivated, Minister, Chaluvarayaswamy