ರನ್ಯಾರಾವ್ ಪ್ರಕರಣದಲ್ಲಿ ಸಚಿವರ ಕೈವಾಡ ಆರೋಪ: ಬಿಜೆಪಿಗೆ ಚಲುವರಾಯಸ್ವಾಮಿ ತಿರುಗೇಟು

ಬೆಂಗಳೂರು,ಮಾರ್ಚ್,10,2025 (www.justkannada.in): ನಟಿ ರನ್ಯಾರಾವ್ ಗೋಲ್ಡ್  ಸ್ಮಗ್ಲಿಂಗ್  ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರಿಬ್ಬರ ಕೈವಾಡ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಬಿಜೆಪಿಗರು ಜನರಿಗೆ ಉಪಯೋಗ ಆಗುವ ಕೆಲಸ ಮಾಡಿದ್ದಾರಾ..? ಅವರು ಒಂದೇ  ಒಂದು ಸಲಹೆ ಕೊಟ್ಟಿಲ್ಲ. ಬರೀ ಟೀಕೆ ಟಿಪ್ಪಣಿ ಮಾಡುತ್ತಾರೆ  ವಿರೋಧ ಪಕ್ಷದವರಿಗೆ ಸ್ಪಷ್ಟತೆ ಇಲ್ಲ. ಈ ಹಿಂದೆ ಯಾವುದ್ಯಾವುದನ್ನ ಹೇಳಿದ್ದರೂ ಅವೆಲ್ಲವೂ ಹುಸಿಯಾಗಿದೆ. ರನ್ಯಾರಾವ್ ಪ್ರಕರಣದಲ್ಲಿ ಸಚಿವರ ಕೈವಾಡ ಆರೋಪ ಸಂಬಂಧ ಸಿಬಿಐ ತನಿಖೆ ನಡೆಸಲಿ. ಅಮೇಲೆ ಸತ್ಯಾ ಗೊತ್ತಾಗಲಿದೆ ಎಂದರು.

ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಬಂಧನವಾದ ಬೆನ್ನಲ್ಲೆ ರನ್ಯಾರಾವ್ ಸಚಿವರಿಗೆ ಕರೆ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ.  ಮೂವರು ಸಚಿವರ ಸಂಪರ್ಕದ ಬಗ್ಗೆಯೂ ಮಾತನಾಡುತ್ತಿದ್ದಾರೆ.  ಸಿಬಿಐ ತನಿಖೆ ನಡೆಯುತ್ತಿದೆ.  ಸತ್ಯಾಂಶ ಹೊರ ಬರಲಿ ಎಂದು ಬಿಜೆಪಿ ಶಾಸಕ  ಭರತ್ ಶೆಟ್ಟಿ ಆರೋಪಿಸಿದ್ದರು.

Key words: Allegations, Ranya Rao case, minister, Chaluvarayaswamy, BJP