ರಾಜಕೀಯವಾಗಿ ಹೆಚ್ ಡಿಕೆ ಭೇಟಿ ಮಾಡುವ ಅವಶ್ಯಕತೆ ಇಲ್ಲ- ಡಿನ್ನರ್ ಮೀಟಿಂಗ್ ಕುರಿತು ಸಚಿವ ಚಲುವರಾಯಸ್ವಾಮಿ ನುಡಿ

ಮಂಡ್ಯ,ಮಾರ್ಚ್,26,2025 (www.justkannada.in):  ರಾಜ್ಯದಲ್ಲಿ ಹನಿಟ್ರ್ಯಾಪ್ ವಿಚಾರ ಸದ್ದು ಮಾಡುತ್ತಿರುವ ನಡುವೆಯೇ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಜೊತೆ ಡಿನ್ನರ್ ಮೀಟಿಂಗ್ ನಡೆಸಿರುವುದು ಸಂಚಲನ ಸೃಷ್ಠಿಸಿದ್ದು ಈ ಕುರಿತು  ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಚಿವ ಚಲುವರಾಯಸ್ವಾಮಿ,  ಸತೀಶ್ ಜಾರಕಿಹೊಳಿ ನಮ್ಮ ಪಕ್ಷದ ಹಿರಿಯ ಶಾಸಕ, ಸಚಿವರು.  ಅದು ರಾಜಕೀಯ ಭೇಟಿ ಆಗಿರಲ್ಲ. ರಾಜಕೀಯವಾಗಿ  ಹೆಚ್ ಡಿ ಕುಮಾರಸ್ವಾಮಿ ಅವರನ್ನ ಭೇಟಿ ಮಾಡುವ ಅವಶ್ಯಕತೆ ಇಲ್ಲ. ಇವರ ಭೇಟಿ ಯಾಕೆ ಆಯ್ತು ಅಂತಾ ನಾನು ಕೇಳೋಕೆ ಆಗಲ್ಲ ಎಂದರು.

ಅಭಿವೃದ್ದಿ ವಿಚಾರದಲ್ಲಿ ಭೇಟಿ ಮಾಡಿದ್ರೆ ತಪ್ಪೇನಿದೆ – ಸಚಿವ ಎಂ.ಬಿ ಪಾಟೀಲ್.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್, ಅಭಿವೃದ್ದಿ ವಿಚಾರದಲ್ಲಿ ಭೇಟಿ ಮಾಡಿದ್ರೆ ತಪ್ಪೇನಿದೆ.  ಯಾರು ಯಾರನ್ನು ಭೇಟಿ ಮಾಡಬೇಡಿ ಅನ್ನೋಕೆ ಆಗಲ್ಲ.  ನಾವು ಅನೇಕ ಕೇಂದ್ರ ಸಚಿವರನ್ನ ಭೇಟಿಯಾಗಿದ್ದೇವೆ ಎಂದರು.

Key words: HDK, Sathish jarkiholi, meeting, Minister, Chaluvarayaswamy