ಬೆಂಗಳೂರು,ನವೆಂಬರ್,22,2021(www.justkannada.in): ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಮುಖ್ಯಸ್ಥರಾಗಿದ್ದ ಡಾ.ಸಂಗನಬಸವ ಮಹಾಸ್ವಾಮಿಗಳ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಕಂಬನಿ ಮಿಡಿದಿದ್ದಾರೆ.
`ದಾಸೋಹ, ಶಿಕ್ಷಣ, ದಮನಿತ ಸಮುದಾಯಗಳ ಶ್ರೇಯೋಭಿವೃದ್ಧಿಗಳನ್ನು ತ್ರಿಕರಣಪೂರ್ವಕವಾಗಿ ಮಾಡುತ್ತಿದ್ದ ಸ್ವಾಮೀಜಿಗಳ ಅಗಲುವಿಕೆಯಿಂದ ಸಮಾಜವು ಸೇವಾ ಮನೋಭಾವದ ಸಂತರೊಬ್ಬರನ್ನು ಕಳೆದುಕೊಂಡಂತಾಗಿದೆ,’ ಎಂದು ಸಚಿವ ಅಶ್ವಥ್ ನಾರಾಯಣ್ ತಮ್ಮ ಶೋಕಸಂದೇಶದಲ್ಲಿ ದುಃಖಿಸಿದ್ದಾರೆ.
`ಪೂಜ್ಯರು ನಾಡು, ನುಡಿ ಮತ್ತು ಸಮಾಜದ ಸರ್ವತೋಮುಖ ಏಳ್ಗೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರ ವ್ಯಕ್ತಿತ್ವವು ಮಾದರಿಯಾಗಿದ್ದು, ದೊಡ್ಡ ಮೇಲ್ಪಂಕ್ತಿಯನ್ನು ಹಾಕಿಕೊಟ್ಟು ಹೋಗಿದ್ದಾರೆ. ಅವರು ತೋರಿಸಿಕೊಟ್ಟ ಹಾದಿಯಲ್ಲಿ ಸಮಾಜವು ಮುನ್ನಡೆಯಬೇಕು,’ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಲಿಂಗೈಕ್ಯ ಸ್ವಾಮೀಜಿಗಳ ಆತ್ಮಕ್ಕೆ ಪರಮಾತ್ಮನು ಶಾಂತಿ ಕರುಣಿಸಿ, ನೋವಿನಲ್ಲಿರುವ ಭಕ್ತರು ಮತ್ತು ಅನುಯಾಯಿಗಳಿಗೆ ಸಮಾಧಾನವನ್ನು ಅನುಗ್ರಹಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
Key words: Minister- CN Ashwath Narayan -condoles – death – Halakere Sri