ನಮ್ಮ ಸಭೆ ಸಹಿಸಲ್ಲ ಅಂದ್ರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ಜನವರಿ,8,2025 (www.justkannada.in):  ಇಂದು ನಡೆಯಬೇಕಿದ್ದ ಡಿನ್ನರ್ ಮೀಟಿಂಗ್ ರದ್ದುಗೊಳಿಸಿರುವ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಈ ಸಭೆ ಮುಂದಕ್ಕೆ ಹಾಕಿದ್ದೇವೆ. ನಿಗದಿಯಾದಾಗ ಮತ್ತೆ ಹೇಳುತ್ತೇವೆ ಎಂದಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್,  ನಮ್ಮ ಸಭೆಯನ್ನು ಸಹಿಸುವುದಿಲ್ಲ ಅಂತ ಯಾರೂ ಹೇಳಿಲ್ಲ. ನಮ್ಮ ಸಭೆ ಸಹಿಸಲ್ಲ ಅಂದ್ರೆ ಅದಕ್ಕ ತಕ್ಕ ಉತ್ತರ ಕೊಡತ್ತೇವೆ.  ಆ ಶಕ್ತಿ ಇದೆ ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ಗೆ ದೂರು ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ದೂರು ಕೊಟ್ಟಿರುವ ಬಗ್ಗೆ ನನಗೆ ಗೊತ್ತಿಲ್ಲ. ಈ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ ರನ್ನೂ ಕರೆಯಬೇಕು ಅಂತಾ ಚರ್ಚೆಯಾಗಿತ್ತು. ರಾಜಕಾರಣ ಮಾಡುವುದಾದರೇ ಓಪನ್ ಆಗಿಯೇ ಮಾಡುತ್ತೇವೆ  ಮುಚ್ಚುಮರೆ ಇಲ್ಲ. ದಲಿತ ಸಮುದಾಯದ ಮೇಲಿನ ದೌರ್ಜನ್ಯ ಬಗ್ಗೆ ಚರ್ಚೆ ಆಗಬೇಕು. ಈ ಸಭೆ ಮುಂದಕ್ಕೆ ಹಾಕಿದ್ದೇವೆ. ನಿಗದಿಯಾದಾಗ ಮತ್ತೆ ಹೇಳುತ್ತೇವೆ ಎಂದರು.

Key words: Dinner Meeting, Home Minister, Dr. G. Parameshwar