ಬೆಂಗಳೂರು,ಫೆಬ್ರವರಿ,6,2025 (www.justkannada.in): ಬೀಟ್ ಕಾಯಿನ್ ಪ್ರಕರಣದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದ್ದು, ಇದೀಗ ಬಂಧನದ ಭೀತಿ ಎದುರಾಗಿದೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಬಿಟ್ ಕಾಯಿನ್ ಕೇಸ್ ನಲ್ಲಿ ನಲಪಾಡ್ ಗೆ ನೋಟಿಸ್ ನೀಡಲಾಗಿದೆ. ಬಿಟ್ ಕಾಯಿನ್ ಪ್ರಕರಣ ತನಿಖೆ ನಡೆಯುತ್ತಿದೆ. ನಲಪಾಡ್- ಶ್ರೀಕಿ ನಡುವೆ ವ್ಯವಹಾರ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದರು.
ಮೈಕ್ರೋ ಫೈನಾನ್ಸ್ ಕಿರುಕುಳ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮೈಕ್ರೋ ಫೈನಾನ್ಸ್ ಬಿಲ್ ರಾಜ್ಯಪಾಲರಿಗೆ ಕಳುಹಿಸಿದ್ದೇವೆ. ರಾಜ್ಯಪಾಲರ ಸಹಿ ಆಗಿ ಬರಬೇಕು. ಬದಲಾವಣೆಗೆ ಸೂಚನೆ ನೀಡಿದರೇ ಸರಿ ಮಾಡುತ್ತೇವೆ ಎಂದರು.
Key words: Notice, Nalapad, Bitcoin case, Minister, Dr. G. Parameshwar