ಲಾಕ್‍ಡೌನ್ ತೆರವಿನ ಬಳಿಕ ಮುಂದೇನು..? : ಚಿತ್ರರಂಗ, ಕ್ರೀಡಾಲೋಕದ ದಿಗ್ಗಜರ ಜತೆ ವಿಡಿಯೋ ಸಂವಾದ ನಡೆಸಿದ ಡಾ.ಸುಧಾಕರ್.

 

ಬೆಂಗಳೂರು, ಮೇ 02, 2020 : ( www. justkannada.in news ) ಲಾಕ್‍ಡೌನ್ ತೆರವಿನ ಬಳಿಕ ಎದುರಾಗುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಮಾರ್ಗೋಪಾಯಗಳ ಬಗ್ಗೆ ನಾನಾ ಕ್ಷೇತ್ರಗಳ ಗಣ್ಯರ ಜತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸಮಾಲೋಚನೆ ಆರಂಭಿಸಿದ್ದಾರೆ.

ಮೊದಲ ಹಂತದಲ್ಲಿ ಕನ್ನಡ ಚಿತ್ರರಂಗ ಹಾಗೂ ಕ್ರೀಡಾಲೋಕದ ದಿಗ್ಗಜರ ಜತೆ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.  ಕರೋನಾ ವೈರಾಣು ಜತೆಗೆ ಮುಂಬರುವ ದಿನಗಳಲ್ಲಿ ಬದುಕು ನಡೆಸುವ ಅನಿವಾರ್ಯತೆ ಎದುರಾಗಿರುವ ಹಿನ್ನಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಅನುಸರಿಸಬೇಕಿರುವ ಕ್ರಮಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು.

ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ರವಿಚಂದ್ರನ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಚಿತ್ರನಟಿ ಮತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ಸಂಗೀತ ನಿರ್ದೇಶಕರಾದ ಗುರುಕಿರಣ್, ಅರ್ಜುನ್ ಜನ್ಯ, ವಾಸುಕಿ ವೈಭವ್, ಚಿತ್ರನಟರಾದ ಪುನಿತ್ ರಾಜ್‍ಕುಮಾರ್, ಉಪೇಂದ್ರ, ರವಿಶಂಕರ್, ನೆನಪಿರಲಿ ಪ್ರೇಮ್, ಅಭಿಷೇಕ್ ಅಂಬರೀಷ್, ಚಿತ್ರನಟಿಯರಾದ ತಾರಾವೇಣು, ಶ್ರುತಿ, ರಾಗಿಣಿ ದ್ವಿವೇದಿ, ಖ್ಯಾತ ಕ್ರಿಕೆಟಿಗ ಅನಿಲ್‍ಕುಂಬ್ಳೆ, ಬಿಲಿಯಡ್ರ್ಸ್ ಪಟು ಪಂಕಜ್ ಅಡ್ವಾಣಿ ಅವರ ಜತೆ ಚರ್ಚಿಸಿ ಅವರಿಂದ ಸಲಹೆಗಳನ್ನು ಪಡೆದುಕೊಂಡರು.
ಬಳಿಕ ನಟರಾದ ದರ್ಶನ್, ಯಶ್, ಸುದೀಪ್ ಸೇರಿದಂತೆ ಚಿತ್ರರಂಗದ ಸಂಘಟನೆಗಳ ಪ್ರಮುಖರ ಜತೆಗೂ ಸಮಾಲೋಚಿಸಲಿದ್ದು ಅವರಿಂದ ಸಲಹೆ ಪಡೆಯುವರು.

Minister Dr K Sudhakar - reaches out -to Celebrities- appeals them- to join hands -in raising awareness- COVID-19

ಎರಡು ತಾಸುಗಳ ಕಾಲ ನಡೆದ ಸಮಾಲೋಚನೆಯಲ್ಲಿ ಪಾಲ್ಗೊಂಡಿದ್ದ ಚಿತ್ರರಂಗ ಮತ್ತು ಕ್ರೀಡಾಲೋಕದ ಗಣ್ಯರು ಸರ್ಕಾರ ಇದುವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಮುಂದೆಯೂ ಇದೇ ರೀತಿಯ ಕ್ರಮಗಳ ಮೂಲಕ ರಾಜ್ಯದ ಜನತೆಯ ಸುರಕ್ಷತೆ ಮತ್ತು ದೈನಂದಿನ ಚಟುವಟಿಕೆಗಳಿಗೆ ತೊದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಕೋವಿಡ್ – 19 ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಕೈಗೊಳ್ಳುವ ಯಾವುದೇ ಕಾರ್ಯದಲ್ಲಿ ಸಕ್ರೀಯರಾಗಿ ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಕರೋನಾ ಸೋಂಕಿತ ಮಾಧ್ಯಮ ಪ್ರತಿನಿಧಿಯ ಸಂಪರ್ಕದ ಹಿನ್ನಲೆಯಲ್ಲಿ ಸ್ವಯಂ ದಿಗ್ಭಂಧನ ವಿಧಿಸಿಕೊಂಡು ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿರುವ ಡಾ.ಸುಧಾಕರ್, ಮುಂದಿನ ಹಂತದಲ್ಲಿ ಸಾಮಾಜಿಕ ಹೋರಾಟಗಾರರು, ಸಾಹಿತಿಗಳು, ಕಲಾವಿದರು ಮತ್ತು ಇತರೆ ಪ್ರಮುಖರೊಂದಿಗೆ ಈ ಸಮಾಲೋಚನೆ ಕಾರ್ಯವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

key words : Minister Dr K Sudhakar – reaches out -to Celebrities- appeals them- to join hands -in raising awareness- COVID-19

 

ENGLISH SUMMARY :

 

Minister Dr K Sudhakar reaches out to Celebrities and appeals them to join hands in raising awareness on COVID-19

Minister has appealed to the Sports Persons & Kannada Film Fraternity over video conference to join hands with the Government and spread awareness on COVID-19 and remove the stigma attached with it
Bengaluru, May 02: Medical Education Minister Dr K Sudhakar, today has appealed to several famous sports persons from Karnataka and celebrities from Kannada film industry to increase awareness on COVID-19 and remove the stigma attached to it. He also urged them to creatively inspire people to strictly follow all precautionary measures suggested by Governments to contain the spread of the virus.
Minister Sudhakar, who is presently under home quarantine, took to video conferencing, to urge Sports persons Anil Kumble, Pankaj Advani and Sandalwood celebrities Ravichandran, MP Sumalatha, Puneeth Rajkumar, Upendra, former MLC Tara, Shruthi, Ragini Dwivedi, Nenapirali Prem, Vasuki Vaibhav, Pawan Wodeyar, music Director Arjun Janya, Abhishek Ambareesh, Producer Rockline Venkatesh among others and requested them to support the awareness campaign, especially in removing the stigma attached to COVID-19. He also requested them to participate in a documentary video that is being made as part of the Medical Education Department’s efforts to raise awareness on COVID-19.

Minister Sudhakar, being himself a Doctor, spoke at large with all these celebrities on the issues of the pandemic and the challenges faced by the society and Government. He also stressed the necessity of cultivating the habit of social distancing and personal hygiene practices like washing hands regularly, wearing masks etc. Minister also cleared all the doubts raised by the celebrities during the video conference and earnestly requested them to join hands in Government’s efforts in raising awareness and also do so at their personal levels using social media since they are all influencers and people will listen to them.

Minister Dr Sudhakar has also said that, he will speak to film stars Darshan, Yash, Sudeep and Rakshith Shetty later in the day and will request them to spread awareness among people in these testing times.