ಬೆಂಗಳೂರು,ಫೆಬ್ರವರಿ,17,2021(www.justkannada.in): ಕುರುಬರ ಎಸ್ಟಿ ಮೀಸಲಾತಿಗೆ ಸಚಿವ ಈಶ್ವರಪ್ಪ ಹೋರಾಟ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಕುರುಬ ಸಮುದಾಯದ ಎಸ್ಟಿ ಹೋರಾಟಕ್ಕೆ ಇದು ಸೂಕ್ತ ಸಮಯವಲ್ಲ. ಕುಲಶಾಸ್ತ್ರ ಅಧ್ಯಯನ ವರದಿ ಬಂದ ನಂತರ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಆ ಶಿಫಾರಸ್ಸನ್ನು ಕೇಂದ್ರ ತಿರಸ್ಕರಿಸಿದರೆ ಮಾತ್ರವೇ ಹೋರಾಟದ ಅಗತ್ಯ ಬೀಳಲಿದೆ.
ಈಶ್ವರಪ್ಪ ಓರ್ವ ಬಿಜೆಪಿ ನಾಯಕ. ಮೀಸಲಾತಿಗೆ ಶಿಫಾರಸ್ಸು ಮಾಡಬೇಕಾದ, ಆ ಶಿಫಾರಸ್ಸನ್ನು ಅನುಮೋದಿಸಬೇಕಾದ ಸರ್ಕಾರಗಳು ಬಿಜೆಪಿ ಕೈಯಲ್ಲಿವೆ. ಹಾಗಾಗಿ ಇದೊಂದು ರೀತಿ ಈಶ್ವರಪ್ಪನ ವಿರುದ್ಧ ಈಶ್ವರಪ್ಪನೇ ಹೋರಾಟ ನಡೆಸಿದಂತೆ. ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮಾತ್ರ ಮೀಸಲಾತಿ ನೀಡಲು ಅವಕಾಶವಿದೆ ಎಂದು ಸಿದ್ಧರಾಮಮಯ್ಯ ಸಚಿವ ಈಶ್ವರಪ್ಪ ಅವರ ಕಾಲೆಳೆದಿದ್ದಾರೆ.
ENGLISH SUMMARY…
It is like Eshwarappa fighting against himself: Former CM Siddu
Bengaluru, Feb. 17, 2021 (www.justkannada.in): Former Chief Minister Siddaramaiah in a tweet has given sarcastic remarks on Minister Eshwarappa with respect to the latter’s fight for ST reservation for Kuruba community.
In his tweet Siddaramaiah has stated, “This is not the suitable time to fight for ST reservation for Kuruba community. The State Government has to recommend the Union Government after getting the Genealogy Research report. If the Union Government rejects it after that we have to protest.”
“Eshwarappa is a BJP leader. Recommending for reservation and approving that recommendation is in the hands of BJP now. Therefore Eshwarappa’s fight for reservation for Kuruba community at this juncture is just like a fight against himself. There is a provision to provide reservation only for those communities that have remained socially and educationally backward,” he has explained.
Keywords: Former CM Siddaramaiah/ Eshwarappa/ fight for ST reservation/ Kuruba Community
Key words: minister-eshwarappa-st –reservation- Former CM -Siddaramaiah