ಸಿನಿಮಾ ಟಿಕೆಟ್ ಗೆ  ಏಕರೂಪ ದರ ನಿಗದಿ : ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು,ಮಾರ್ಚ್,6,2025 (www.justkannada.in): ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ‘ಗೆ ಏಕರೂಪ ದರ ನಿಗದಿ ಮಾಡಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಈ ಸಂಬಂಧ ವಿಧಾನಸಭೆ ಕಲಾಪದಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಸಚಿವ ಜಿ.ಪರಮೇಶ್ವರ್ ‘ಚಿತ್ರಮಂದಿರದ ಮಾಲೀಕರೇ ಟಿಕೆಟ್ ದರ ನಿಗದಿ ಮಾಡುವ ಪರಿಸ್ಥಿತಿ ಇದೆ. ಬೇಕಾಬಿಟ್ಟಿಯಾಗಿ ಟಿಕೆಟ್ ದರ ಫಿಕ್ಸ್ ಮಾಡಲಾಗುತ್ತಿದೆ. ಮಲ್ಟಿಫ್ಲೆಕ್ಸ್ ಗಳು ಬೇಕಾಬಿಟ್ಟಿ ವಸೂಲಿ ಮಾಡುತ್ತಿದೆ. ಕನ್ನಡ ಸಿನಿಮಾಗಳಿಗೆ 100, 200 ರೂ ಇದ್ದರೆ ಪರಭಾಷಾ ಸಿನಿಮಾದ ಟಿಕೆಟ್ ಗೆ 500 ,1000 ಇದೆ ಎಂದರು.

ಹಾಗೆಯೇ  ಚಿತ್ರಮಂದಿರದಲ್ಲಿ ವಾಟರ್ ಬಾಟಲ್ ಸೇರಿ ಎಲ್ಲವನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸಿನಿಮಾದ ಟಿಕೆಟ್ ದರಗಿಂತ ಗ್ರಾಹಕರಿಗೆ ನೀರಿನ ಬಾಟಲ್, ತಿನಿಸುಗಳ ದರವೇ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿನಿಮಾ ಟಿಕೆಟ್ ಗೆ ಏಕರೂಪ ದರ ನಿಗದಿ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ಮಾಹಿತಿ ನೀಡಿದರು.

Key words: rate, cinema ticket, Home Minister, G. Parameshwar