ಮೈಸೂರು,ಜನವರಿ,15,2025 (www.justkannada.in): ಸಿದ್ದರಾಮಯ್ಯ ಸಿಎಂ ಕುರ್ಚಿ ಮೇಲೆ ಗಟ್ಟಿಯಾಗಿ ಕುಳಿತಿದ್ದಾರೆ. ಸಿಎಂ ಕುರ್ಚಿಗಾಗಿ ಯಾವುದೇ ರೇಸ್ ನಡೆಯುತ್ತಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಹದೇವಪ್ಪ, ಐದು ವರ್ಷವೂ ಈ ಸರ್ಕಾರ ಗಟ್ಟಿಯಾಗಿರುತ್ತದೆ. ಸಿದ್ದರಾಮಯ್ಯ ಸಿಎಂ ಕುರ್ಚಿಯ ಮೇಲೆ ಗಟ್ಟಿಯಾಗಿ ಕುಳಿತಿದ್ದಾರೆ. ಮುಂದೆಯೂ ಅವರು ಕುಳಿತಿರುತ್ತಾರೆ. ಇದರಲ್ಲಿ ಅಲಗಾಡುತ್ತಿದೆ, ಖಾಲಿಯಾಗುತ್ತಿದೆ ಎಂಬ ಯಾವ ಚರ್ಚೆಯೂ ಬೇಡ. ಸಿಎಂ ಕುರ್ಚಿಗಾಗಿ ರೇಸ್ ನಡೆಯುತ್ತಿಲ್ಲ. ರೇಸ್ ನಡೆಯದ ಮೇಲೆ ಆಕಾಂಕ್ಷಿ ಪ್ರಶ್ನೆಯೇ ಬರುವುದಿಲ್ಲ. ರೇಸ್ ಮುಗಿದಿದೆ ನಾವು ಗುರಿ ತಲುಪಿದ್ದೇವೆ ಸರ್ಕಾರ ಮಾಡುತ್ತಿದ್ದೇವೆ. 2028ಕ್ಕೂ ನಮ್ಮದೇ ಸರ್ಕಾರ ಬರುತ್ತದೆ. ಆಗ ಬೇಕಾದರೆ ರೇಸಿನ ಬಗ್ಗೆ ಮಾತನಾಡೋಣ. ಸದ್ಯಕ್ಕೆ ಆ ರೀತಿಯ ಯಾವ ಪ್ರಶ್ನೆಗಳು ಇಲ್ಲ ಎಂದರು.
ವಿಪಕ್ಷಗಳಿಗೆ ಸಂವಿಧಾನಿಕವಾಗಿ ಕೆಲಸ ಮಾಡಲು ಯಾವ ವಿಚಾರ ಇಲ್ಲ. ಕಾರಣ ಇಲ್ಲದ ವಿಚಾರವನ್ನ ಇದೆ ಎನ್ನುವ ರೀತಿ ಮಾತನಾಡುತ್ತಿದ್ದಾರೆ. ವಿಪಕ್ಷಗಳು ತಮ್ಮ ಹುದ್ದೆ ನಿರ್ವಹಿಸುವಲ್ಲಿ ಸೋತಿವೆ. ವಿಪಕ್ಷಗಳಿಗೆ ರಾಜಕೀಯ ಜವಾಬ್ದಾರಿ ಪ್ರಬುದ್ದತೆ ಎರಡು ಇಲ್ಲ ಎಂದು ಸಚಿವ ಮಹದೇವಪ್ಪ ಕುಟುಕಿದರು.
ಕೆಪಿಸಿಸಿ ಅಧ್ಯಕ್ಷರ ವಿಚಾರದ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ವಿಚಾರದಲ್ಲಿ ನಾನು ಏನು ಹೇಳುವುದಿಲ್ಲ ಎಂದು ಸಚಿವ ಡಾ.ಎಚ್.ಸಿ ಮಹದೇವಪ್ಪ ತಿಳಿಸಿದರು.
Key words: no race, CM, chair, Siddaramaiah, Minister, H.C. Mahadevappa