ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಗಟ್ಟಿ: ಯಾವ ಶಿಂಧೆ ಸರ್ಕಾರವು ಬರಲ್ಲ- ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು,ಮಾರ್ಚ್,1,2025 (www.justkannada.in): ಕಾಂಗ್ರೆಸ್ ನಲ್ಲಿ ಏಕನಾಥ ಶಿಂಧೆ ಬರ್ತಾರೆ ಎಂಬ ಮಾಜಿ ಸಚಿವ ಶ್ರೀರಾಮುಲು ಹೇಳಿಕೆಗೆ ತಿರುಗೇಟು ನೀಡಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ, ಇಲ್ಲಿ ಇರೋದು ಸಿದ್ದರಾಮಯ್ಯ ಸರ್ಕಾರ. ಯಾವ ಶಿಂಧೆ ಸರ್ಕಾರವು ಬರಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಗಟ್ಟಿಯಾಗಿದೆ ಎಂದು ಕುಟುಕಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಅಧಿಕಾರ ಹಂಚಿಕೆ ವಿಚಾರ ನಮಗೆ ಗೊತ್ತಿಲ್ಲ ಇನ್ನು ನಿಮಗೆ ಹೇಗೆ ಗೊತ್ತು.? ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಮರು ಪ್ರಶ್ನೆ ಹಾಕಿದರು.

ನಿಮಗೆ ಹೇಳಿದವರು ಯಾರು ? ನಮ್ಮಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಯಾವ ಶಿಂಧೆನೂ ಬರಲ್ಲ. ಸಚಿವ ರಾಜಣ್ಣ ಹೇಳಿದ್ದು ಮುಖ್ಯವಲ್ಲ. ಆ ರೀತಿಯ ಚರ್ಚೆ ಏನು ಆಗಿಲ್ಲ ಎಂದು ಹೆಚ್.ಸಿ ಮಹದೇವಪ್ಪ ಸ್ಪಷ್ಟಪಡಿಸಿದರು.

ಎಸ್ ಇಪಿ, ಟಿಎಸ್ ಪಿ ಹಣ ದುರುಪಯೋಗ ಬಿಜೆಪಿ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ದಲಿತರ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. 17 ರಿಂದ 18 ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಿದಲ್ಲಿದೆ.  ದೇಶದಲ್ಲಿ ದಲಿತರು 24% ಜನ ಇದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬೊಮ್ಮಾಯಿ ಸಿಎಂ ಆಗಿದ್ದರು. ಆಗ 10 ಸಾವಿರ ಕೋಟಿ ದಲಿತರ ಹಣ ದುರ್ಬಳಕೆ ಆಯಿತು.  ಆದರೆ ಯಾಕೆ ಯಾರು ಅದನ್ನ ಪ್ರಶ್ನೆ  ಮಾಡಿಲ್ಲ ? ಈಗ ಪರಿಶಿಷ್ಟ ಜನ ಪರಿಶಿಷ್ಟ ಜನಾಂಗದ ಹಣ ದುರ್ಬಳಕೆ ಅಂತ ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ. ಆದರೆ ನಾವು ಯಾವುದೇ ಹಣ ದುರ್ಬಳಕೆ ಮಾಡುತ್ತಿಲ್ಲ. ಕಾನೂನು ಪ್ರಕಾರವೇ ಹಣ ಬಳಕೆ ಮಾಡುತ್ತಿದ್ದೇವೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ  ಬೆಳವಣಿಗೆ ಆಗತ್ತೆ ಎಂಬ ರಾಮುಲು ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್ ಸಿ ಮಹದೇವಪ್ಪ,  ಯಾವ ಬೆಳವಣಿಗೇನೂ ಆಗಲ್ಲ ಎಂದರು.

Key words: Siddaramaiah, government, Secure, Minister, H.C. Mahadevappa