ರಾಜ್ಯದ ಜನರಿಗಾಗಿಯೇ ಗ್ಯಾರಂಟಿ ಪ್ರಾರಂಭ: ನಮಗೆ ಬದ್ದತೆ ಇದೆ, ಮುಂದುವರಿಸುತ್ತೇವೆ- ಸಚಿವ ಹೆಚ್.ಕೆ ಪಾಟೀಲ್

ಬಳ್ಳಾರಿ,ಫೆಬ್ರವರಿ,24,2025 (www.justkannada.in): ರಾಜ್ಯದ ಜನರಿಗಾಗಿಯೇ ಗ್ಯಾರಂಟಿ ಯೋಜನೆಗಳನ್ನ ಪ್ರಾರಂಭ ಮಾಡಿದ್ದೇವೆ. ನಮಗೆ ಬದ್ದತೆ ಇದೆ, ಗ್ಯಾರಂಟಿ ಯೋಜನೆಗಳನ್ನ  ಮುಂದುವರಿಸುತ್ತೇವೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿ ಗೃಹ ಜ್ಯೋತಿ ಸಬ್ಸಿಡಿ ಹಣ ಸರ್ಕಾರದಿಂದ ಎಸ್ಕಾಂಗಳಿಗೆ ಪಾವತಿಯಾಗದ ವಿಚಾರಕ್ಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಎಚ್​.ಕೆ. ಪಾಟೀಲ್​, ಗೃಹ ಜ್ಯೋತಿ ಹಣ, ಗೃಹ ಲಕ್ಷ್ಮಿ ಹಣ ಎಲ್ಲವನ್ನೂ ಬಿಡುಗಡೆಗೊಳಿಸುತ್ತೇವೆ. ಗ್ಯಾರಂಟಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ.

ಪಾವತಿಯಾಗದ ಗೃಹ ಜ್ಯೋತಿ ಹಣ ಬಿಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಈಗಿರುವ ಶಿಸ್ತಿನ ವ್ಯವಸ್ಥೆ ಏನಿದೆಯೋ ಅದರಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಯಾರಿಗೂ ತೊಂದರೆ ಆಗದಂತೆ ಕ್ರಮ ಕೈಗೊಳ್ತೇವೆ’ ಎಂದರು.

‘ಗ್ಯಾರಂಟಿ ಯೋಜನೆಗೆ ಹಣ ಖರ್ಚುಗುತ್ತಿದ್ದು,  58 ಸಾವಿರ ಕೋಟಿ ಹಣ ಅಂದ್ರೆ ಸಣ್ಣ ಮೊತ್ತ ಅಲ್ಲ. ರಾಜ್ಯದ ಜನರಿಗಾಗಿಯೇ ಈ ಗ್ಯಾರಂಟಿ ಪ್ರಾರಂಭ ಮಾಡಿದ್ದೇವೆ. ನಮಗೆ ಬದ್ದತೆ ಇದೆ, ಮುಂದುವರಿಸುತ್ತೇವೆ. ನಮ್ಮ ಪಕ್ಷದ ಯಾವು ಶಾಸಕರೂ ಗ್ಯಾರಂಟಿ ವಿರುದ್ಧವಿಲ್ಲ. ಯಾರೂ ಕಡಿತ ಮಾಡಿ ತಕರಾರು ತೆಗೆದಿಲ್ಲ’ ಎಂದರು.

Key words: , state Guarantee, people, continue, Minister, H.K. Patil