ಹಾಲು, ವಿದ್ಯುತ್ ದರ ಏರಿಕೆ ಸಮರ್ಥಿಸಿಕೊಂಡ ಸಚಿವ ಹೆಚ್.ಕೆ ಪಾಟೀಲ್

ಬೆಂಗಳೂರು,ಮಾರ್ಚ್,28,2025 (www.justkannada.in):  ರಾಜ್ಯದಲ್ಲಿ ಹಾಲು ಮತ್ತು ವಿದ್ಯುತ್ ದರ ಏರಿಕೆ ಮಾಡಿದ್ದು ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನತೆಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಇತ್ತ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಬೆಲೆ ಏರಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಹೆಚ್.ಕೆ ಪಾಟೀಲ್  ಹಾಲಿನ ದರವನ್ನ 4 ರೂ. ಹೆಚ್ಚಳ ಮಾಡಲಾಗಿದ್ದು, ಹೆಚ್ಚಳ ಮಾಡಿರುವ 4 ರೂ ಅನ್ನು ರೈತರಿಗೆ ಕೊಡುತ್ತೇವೆ.  ಬೇರೆ ರಾಜ್ಯಕ್ಕೆ  ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ 5 ರೂ ಕಡಿಮೆ ಇದೆ ಎಂದರು.

ಹಾಗೆಯೇ  ವಿದ್ಯುತ್ ದರ ಏರಿಕೆಯೂ ಅನಿವಾರ್ಯವಾಗಿದೆ. ಬಡವರಿಗೆ ಉಚಿತ ಕೊಡುತ್ತೇವೆ. ಶ್ರೀಮಂತರಿಗೆ ಚಾರ್ಜ್ ಮಾಡುತ್ತೇವೆ ಎಂದು ಹೆಚ್.ಕೆ ಪಾಟೀಲ್ ತಿಳಿಸಿದರು.

Key words: Minister, H.K. Patil, defends, milk, electricity, price hike