ನಾವಾಗಿಯೇ ನಾವು ಏನು ಮಾಡಲ್ಲ: ನಮ್ಮನ್ನ ಕೆಣಗಿದರೆ ನಾವು ಬಿಡಲ್ಲ ಎಂಬುದು ನಮ್ಮ ದೇಶದ ನಿಲುವು- ಸಚಿವ ಹೆಚ್.ಕ ಪಾಟೀಲ್

ಬೆಳಗಾವಿ,ಏಪ್ರಿಲ್,28, 2025 (www.justkannada.in): ಜಮ್ಮುಕಾಶ್ಮೀರದ ಪಹಲ್ಗಾಮ್ ನ‍ಲ್ಲಿ ನಡೆದ ಉಗ್ರರ ದಾಳಿ ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಕೇಂದ್ರ ಸರ್ಕಾರ ಕೈಗೊಂಡಿರುವ ಕೆಲ ನಿರ್ಧಾರಗಳ ಬಗ್ಗೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿ ಸಚಿವ ಹೆಚ್.ಕೆ ಪಾಟೀಲ್, ನಾವಾಗಿಯೇ ನಾವು ಏನು ಮಾಡಲು ಹೋಗುವುದಿಲ್ಲ. ನಮ್ಮನ್ನು ಕೆಣಕಿದರೆ ನಾವು ಬಿಡಲ್ಲ ಎನ್ನುವುದು ದೇಶದ ನಿಲುವು. ಇದೆಲ್ಲವೂ ರಾಜಕೀಯ ವಿಚಾರಲ್ಲ.  ಚರ್ಚಾ ವಸ್ತುಗಳೂ ಅಲ್ಲ. ದೇಶದ ವಿಚಾರ ಬಂದಾಗ ಪ್ರದಾನ ಮಂತ್ರಿ ನಿರ್ಧಾರ ಮಾಡ್ತಾರೆ.  ಇದರ ಕುರಿತು ಪ್ರತಿಯೊಬ್ಬರು ಚರ್ಚಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.

Key words: Pahalgam, Terrorist, attack, Minister, H.K. Patil