ಮೈಸೂರು,ಅಕ್ಟೋಬರ್,3,2023(www.justkannada.in): ವೀರಶೈವ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸಿದೆ ಎಂದು ಕೇಳಿ ಬಂದಿರುವ ಆರೋಪವನ್ನು ಸಚಿವ ಹೆಚ್.ಸಿ ಮಹದೇವಪ್ಪ ತಳ್ಳಿಹಾಕಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಸರ್ಕಾರ ಸಾಮಾಜಿಕ ತಳಹದಿಯ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಸಚಿವ ಸಂಪುಟದಲ್ಲಿ ಎಲ್ಲಾ ಸಮಾಜಗಳಿಗೂ ಆದ್ಯತೆ ನೀಡಲಾಗಿದೆ. ಸ್ವತಃ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ಸಚಿವರಾಗಿದ್ದಾರೆ. ಏಳು ಮಂದಿ ವೀರಶೈವ ಲಿಂಗಾಯತ ಸಚಿವರಿದ್ದಾರೆ. ಸಿದ್ದರಾಮಯ್ಯ ಕುರುಬ ಸಮಾಜದ ಓಲೈಕೆ ಮಾಡುತ್ತಿಲ್ಲ. ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದರು.
ಎಲ್ಲಾರೂ ಒಟ್ಟಾಗಿ ಸೇರಿ ಸರ್ಕಾರ ನಡೆಸಬೇಕು. ಇಂಡಿಯಾ ಈಸ್ ಎ ಸೆಕ್ಯೂಲರ್ ಕಂಟ್ರಿ. ಜಾತಿ ಆಧಾರದ ಮೇಲೆ ನಿರ್ಧಾರಗಳು ಆಗುವುದಿಲ್ಲ. ಯಾರೋ ಏನೋ ಹೇಳಿರ್ತಾರೆ ಪೋಸ್ಟ್ ಸಿಕ್ಕಿರಲ್ಲ. ಅದಕ್ಕೆ ಈ ರೀತಿ ಹೇಳುತ್ತಿರುತ್ತಾರೆ. ಸರ್ಕಾರ ಉದ್ದೇಶ ಪೂರ್ವಕವಾಗಿ ಮಾಡುವುದಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಇವೆಲ್ಲಾ ಸಾಧ್ಯವೇ ಇಲ್ಲ. ಸರ್ಕಾರದಲ್ಲಿ ಕುರುಬರು, ಒಕ್ಕಲಿಗರು, ಬ್ರಾಹ್ಮಣರು ಸೇರಿದಂತೆ ಎಲ್ಲಾ ಜಾತಿಯವರು ಇರುತ್ತಾರೆ ಎಂದರು.
ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ. ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಎಲ್ಲಿ ಮಾತನಾಡಬೇಕೊ ಅಲ್ಲಿ ಮಾತನಾಡಿ ಎಂದು ಹೈ ಕಮಾಂಡ್ ಸೂಚನೆ ಕೊಟ್ಟಿದೆ. ಮಾತನಾಡಬೇಡಿ ಅಂಥಾ ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದರು.
ಸರ್ಕಾರ ಬೀಳುತ್ತೆ ಎಂಬ ಸಿ.ಪಿ ಯೋಗೇಶ್ವರ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಯೋಗೇಶ್ವರ್ ಹಗಲು ಕನಸು ಕಾಣುತ್ತಿದ್ದಾರೆ. 132 ಜನ ಶಾಸಕರು ಇದ್ದಾರೆ ಯಾಕೆ ಸರ್ಕಾರ ಬೀಳುತ್ತೆ. ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆ ಇಲ್ಲ ಅಂಥಾ ಅರ್ಥ ಅಲ್ವಾ. ಜನರ ಆದೇಶ ಮೇಲೆ ಅವರಿಗೆ ನಂಬಿಕೆ ಇಲ್ಲಾ. ಹೇಗೆ ಸರ್ಕಾರ ಬೀಳುತ್ತೆ ಅಂಥಾ ಹೇಳುತ್ತಾರೆ? ಅಪರೇಷನ್ ಎಲ್ಲಾ ನಡೆಯುವುದಿಲ್ಲ. ಎಲ್ಲಾ ಅವರೇ ಮಾಡಿಕೊಳ್ಳಬೇಕು,ಇಲ್ಲಿ ಏನೂ ನಡೆಯಲ್ಲ ಎಂದು ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಕೇಸ್ ವಾಪಸ್ ವಿಚಾರ ಕುರಿತು ಸಮರ್ಥನೆ.
ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೇಸ್ ವಾಪಸ್ ಪಡೆಯುವ ವಿಚಾರ ಕುರಿತು ಸಮರ್ಥಿಸಿಕೊಂಡ ಸಚಿವ ಹೆಚ್.ಸಿ.ಮಹದೇವಪ್ಪ. ಅದು ಕ್ಯಾಬಿನೆಟ್ ಸಬ್ ಕಮಿಟಿ ತೀರ್ಮಾನ. ಯಾವುವು ರಾಜಕೀಯ ಪ್ರೇರಿತ ಕೇಸ್ಗಳು ಆಗಿವೆ, ಅಂತಹ ಕೇಸ್ ಗಳನ್ನು ಕೇಸ್ ಬೈ ಕೇಸ್ ಪರಿಶೀಲನೆ ಮಾಡುತ್ತೆ. ಕ್ಯಾಬಿನೆಟ್ ಸಬ್ ಕಮಿಟಿ ಈ ಬಗ್ಗೆ ವಾಪಸ್ ಪಡೆಯಲು ಶಿಫಾರಸ್ಸು ನೀಡುತ್ತೆ. ಮೆರಿಟ್ ಮೇಲೆ ಕ್ಯಾಬಿನೆಟ್ ಕಮಿಟಿ ಇದನ್ನ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು.
Key words: Minister -HC Mahadevappa – react-neglecting – Veerashaiva -Lingayat –community