ಗದಗ,ಜುಲೈ,29,2023(www.justkannada.in): ಮತದಾರರಿಗೆ ಗ್ಯಾರಂಟಿ ಆಮಿಷ ಒಡ್ಡಿದ ಪ್ರಕರಣ ಕುರಿತು ಸಿಎಂ ಸಿದ್ಧರಾಮಯ್ಯಗೆ ಹೈಕೋರ್ಟ್ ನೋಟಿಸ್ ನೀಡಿಲ್ಲ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಮತದಾರರಿಗೆ ಉಚಿತ ಗ್ಯಾರಂಟಿ ಆಮಿಷ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳ ಹಿಂದೆ ಸಿಎಂ ಸಿದ್ಧರಾಮಯ್ಯಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಹೆಚ್. ಕೆ ಪಾಟೀಲ್, ಸಿದ್ದರಾಮಯ್ಯ ಅವರಿಗೆ ನೋಟಿಸ್ ಕೊಟ್ಟಿಲ್ಲ. ಗ್ಯಾರೆಂಟಿ, ವಚನ, ಮಾತುಕೋಡುವುದು ಚುನಾವಣೆಯಲ್ಲಿ ವಿಶೇಷವಾದದ್ದು. ಪ್ರಸ್ತುತ ಧರ್ಮದ ಹೆಸರಿನಲ್ಲಿ, ಜಾತಿ ಹೆಸರಿನ ಮೇಲೆ, ಹಣ ಪೋಲು ಮಾಡುವುದರ ಬಗ್ಗೆ ಗಂಭೀರವಾದ ಆಲೋಚನೆ ಮಾಡಬೇಕು. ಅವುಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಉಡುಪಿ ಕಾಲೇಜಿನಲ್ಲಿ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಕೆ ಪಾಟೀಲ್, ಪ್ರಕರಣದಲ್ಲಿ ಯಾರ್ಯರು ಇದ್ದಾರೆ ಅವರ ಹೇಳಿಕೆ ಪಡೆಯಲಾಗಿದೆ. ಒಂದು ವರ್ಷದಿಂದ ನೀವೇ ಅಧಿಕಾರದಲ್ಲಿ ಇದ್ರಿ ಅಂತಾ ನಾವು ಕೇಳೋದಕ್ಕೆ ಬರಲ್ವಾ. ಕಳೆದ ಒಂದು ವರ್ಷದಿಂದ ಆಗಿದ್ರೆ ಬಿಜೆಪಿಯವರು ಏನ್ ಮಾಡ್ತಿದ್ರು. ನಿಮ್ಮಲ್ಲೇ ಗುಪ್ತಚರ ಇಲಾಖೆ ಇತ್ತು. ಪೊಲೀಸರು ನಿಮ್ಮ ಕೈಯಲ್ಲಿದ್ದರು ಅಲ್ವಾ ಎಂದು ಬಿಜೆಪಿಗೆ ಕುಟುಕಿದರು.
Key words: Minister -HK Patil – High Court – not given -notice – CM Siddaramaiah.