ತುಮಕೂರು,ಜನವರಿ,8,2025 (www.justkannada.in): ರಾಜ್ಯದಲ್ಲಿ ಡಿನ್ನರ್ ಮೀಟಿಂಗ್ ಪಾಲಿಟಿಕ್ಸ್ ಬಗ್ಗೆ ಚರ್ಚೆಯಾಗುತ್ತಿದ್ದು ಇಂದು ಸಚಿವ ಪರಮೇಶ್ವರ್ ಕರೆದಿದ್ದ ಡಿನ್ನರ್ ಮೀಟಿಂಗ್ ರದ್ದಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಹಕಾರ ಸಚಿವ ಕೆ.ಎನ್ ರಾಜಣ್ಣ, ಸಭೆ ರದ್ದಾಗಿಲ್ಲ. ಮುಂದೂಡಿದ್ದೇವೆ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಎಸ್ ಸಿ ಎಸ್ ಟಿ ಸಮಾಜದ ಸಮಸ್ಯೆಗಳ ಬಗ್ಗೆ ಸಭೆ ಆಯೋಜಿಸಲಾಗಿತ್ತು. ಕೆಲವೇ ದಿನಗಳಲ್ಲಿ ಸಭೆ ದಿನಾಂಕ ಪ್ರಕಟ ಮಾಡುತ್ತೇವೆ. ಸಮಸ್ಯೆಗಳ ಬಗ್ಗೆ ಮೀಟಿಂಗ್ ಮಾಡಬೇಡಿ ಅಂದ್ರೆ ಹೇಗೆ? ನಾವು ಸಭೆ ಮಾಡಿದ್ರೆ ಡಿಕೆ ಶಿವಕುಮಾರ್ ಯಾಕೆ ಬೇಸವಾಗುತ್ತಾರೆ. ನಾವೇನು ಡಿಕೆ ಶಿವಕುಮಾರ್ ಅವರ ಆಸ್ತಿ ಬರೆಸಿಕೊಂಡಿದ್ದೀವಾ? ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಎಸ್ ಟಿ ಸಮಸ್ಯೆ ಬಗ್ಗೆ ಸಭೆ ಮಾಡಬೇಡಿ ಅಂದ್ರೆ ಹೇಗೆ? ಇವರೆಲಾ ಎಸ್ ಸಿ ಎಸ್ ಟಿ ವಿರೋಧಿಗಳಾ? ಎಂದು ಪ್ರಶ್ನಿಸಿದ ಸಚಿವ ಕೆಎನ್ ರಾಜಣ್ಣ, ಮೊನ್ನೆಯ ಡಿನ್ನರ್ ಪಾರ್ಟಿ ಗೊಂದಲ ಆಗಿದೆ. ಆ ಗೊಂದಲ ಜೊತೆ ಈ ಗೊಂದಲ ಬೇಡ ಎಂದು ಮುಂದೂಡಿಕೆ ಮಾಡಿದ್ದೇವೆ ಎಂದರು.
Key words: DK Shivakumar, Dinner meeting, Minister, K.N. Rajanna