ಬೆಂಗಳೂರು,ಫೆಬ್ರವರಿ,11,2025 (www.justkannada.in): ನಿನ್ನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಬಳಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ದ ಸಹಕಾರ ಸಚಿವ ಕೆ.ಎನ್ ರಾಜಣ್ಣ ಗರಂ ಆಗಿ ಮಾತನಾಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಪೊಲೀಸರಿಗೆ ಏನಾಗಿದೆ. ಮಿನಿಮಮ್ ಕಾಮನ್ ಸೆನ್ಸ್ ಬೇಡವಾ? ಯಾರೋ ಆರ್ ಎಸ್ ಎಸ್ ನವರು ಈ ಕೃತ್ಯವನ್ನ ಮಾಡಿದ್ದಾನೆ. ಆತನ ಮೇಲೆ ಕೇಸ್ ಆಗಿದೆ ಅರೆಸ್ಟ್ ಆಗಿದ್ದಾನೆ. ಪೊಲೀಸರು ಆತನನ್ನು ಏಕೆ ಉದಯಗಿರಿ ಪೊಲೀಸರ ಠಾಣೆಯಲ್ಲಿ ಇಟ್ಟರು ಉದಯಗಿರಿಯಲ್ಲಿ ಮುಸ್ಲೀಂ ಬಾಹುಳ್ಯ ಇದೆ. ನಾವಷ್ಟೆ ಅಲ್ಲ ಅಧಿಕಾರಿಗಳು ಸಹ ನಿರ್ಧಾರ ಮಾಡಬೇಕು ಎಂದು ಪೊಲೀಸರ ವಿರುದ್ದ ಕಿಡಿಕಾರಿದರು.
ನಿನ್ನೆ ಮುಸ್ಲಿಂ ಧರ್ಮಗುರು ಕುರಿತು ಅವಹೇಳನಕಾರಿ ಪೋಸ್ಟ್ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
Key words: Udayagiri, riot case, Minister, K.N. Rajanna, police