ಮುಂದಿನ ಬಜೆಟ್  ಅನ್ನೂ  ಸಿಎಂ ಸಿದ್ದರಾಮಯ್ಯನವರೇ ಮಂಡಿಸುತ್ತಾರೆ- ಸಚಿವ ಕೆ.ಎನ್ ರಾಜಣ್ಣ

ಹಾವೇರಿ,ಮಾರ್ಚ್,8,2025 (www.justkannada.in): ಸಿಎಂ ಬದಲಾವಣೆ ವಿಚಾರ  ಮುನ್ನಲೆಗೆ ತರುವ ಕಾಂಗ್ರೆಸ್ ಮುಖಂಡರಿಗೆ ಅಗ್ಗಾಗ್ಗೆ ತಿರುಗೇಟು ನೀಡುತ್ತಿರುವ ಸಹಕಾರ ಸಚಿವ ಕೆ.ಎನ್ ರಾಜಣ್ಣ ಇದೀಗ ಮುಂದಿನ ಬಜೆಟ್ ಅನ್ನೂ ಸಿಎಂ ಸಿದ್ದರಾಮಯ್ಯನವರೇ ಮಂಡಿಸುತ್ತಾರೆ ಯಾವುದೇ ಅನುಮಾನವಿಲ್ಲ ಎನ್ನುವ ಮೂಲಕ ಮತ್ತೆ ಟಾಂಗ್ ಕೊಟ್ಟಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಮುಂದಿನ ಬಜೆಟ್ ಅನ್ನು ಸಿದ್ಧರಾಮಯ್ಯ ಮಂಡಿಸುತ್ತಾರೆ. 5ವರ್ಷಗಳ ಕಾಲ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಯಾವುದೇ ಅನುಮಾನವಿಲ್ಲ ಅಂತಿಮವಾಗಿ ಹೈಕಮಾಂಡ್ ನಿರ್ಣಯವಾಗಿದೆ ಎಂದರು.

ಸಾಲರಾಮಯ್ಯ ಎಂಬ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಟೀಕೆಗೆ ಕಿಡಿಕಾರಿದ ಕೆ.ಎನ್ ರಾಜಣ್ಣ,  ಎಲ್ಲಾ ಸಮಾಜಕ್ಕೆ ನ್ಯಾಯ ನೀಡಿದ್ದು ಸಿದ್ದರಾಮಯ್ಯ.  ಕುಮಾರಸ್ವಾಮಿಯವರ ಕಾಲದಲ್ಲಿ ಸಾಲ ಮಾಡಿಲ್ವಾ ಕೇಂದ್ರದವರು 15 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಕೇಂದ್ರ ಸಂಪುಟದಲ್ಲಿ ಹೆಚ್ ಡಿಕೆ ಮಂತ್ರಿ ಆಗಿಲ್ವಾ? ಬಡವರು ಹಸಿವಿನಿಂದ  ಇರಬಾರದು ಅಂತಾ ಅನ್ನಭಾಗ್ಯ ನೀಡಿದ್ರು. ಸಾಲ ಮಾಡೋದು ನಿರಂತರ ಪ್ರಕ್ರಿಯೆ. ಹಿರಿಯ ನಾಯಕರಿಂದ ಟೀಕೆ ನಿರೀಕ್ಷಿಸಿರಲಿಲ್ಲ  ಎಂದರು.

Key words: CM Siddaramaiah, next, budget, Minister, K.N. Rajanna