ಬೆಂಗಳೂರು,ಮಾರ್ಚ್,24,2025 (www.justkannada.in): ಹನಿಟ್ರ್ಯಾಪ್ ಬಗ್ಗೆ ಸೂಕ್ತ ಸಮಯದಲ್ಲಿ ದೂರು ನೀಡಲಾಗುವುದು ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಇಂದು ಬೆಂಗಳೂರಿಗೆ ಹೋಗುತ್ತೇನೆ. ಸೂಕ್ತ ಸಮಯದಲ್ಲಿ ದೂರು ಕೊಡುತ್ತೇನೆ, ಹನಿಟ್ರ್ಯಾಪ್ ಬಗ್ಗೆ ಸೂಕ್ತ ಸಮಯದಲ್ಲಿ ದೂರು ನೀಡಲಾಗುವುದು. ಅದಕ್ಕೆ ಸಮಯ ನಿಗದಿ ಮಾಡಿಕೊಂಡಿಲ್ಲ ಎಂದರು.
ರಾಜಣ್ಣಗೆ ಮಂಪರು ಪರೀಕ್ಷೆ ಮಾಡಿ ಎಂಬ ಶಾಸಕ ಮುನಿರತ್ನ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎನ್ ರಾಜಣ್ಣ, ಮೊದಲು ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಲಿ. ಏಕೆಂದರೆ ಮೊದಲೆಲ್ಲಾ ಅವರ ಜೊತೆಯಲ್ಲೇ ಇದ್ದಿದ್ದು ಅಲ್ವಾ..? ಬಹಳ ಹತ್ತಿರದಲ್ಲಿ ಇದ್ದರು. ಹಾಗಾಗಿ ಅವರನ್ನೇ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ಕೆಎನ್ ರಾಜಣ್ಣ ತಿಳಿಸಿದರು.
Key words: Complaint, honey trap, right time, Minister, K.N. Rajanna