ಹನಿಟ್ರ್ಯಾಪ್ ಕುರಿತು ಇಂದು ದೂರು ನೀಡುತ್ತೇನೆ – ಸಚಿವ ಕೆ.ಎನ್ ರಾಜಣ್ಣ

ತುಮಕೂರು,ಮಾರ್ಚ್,25,2025 (www.justkannada.in):  ಕಾರ್ಯಕ್ರಮಗಳಲ್ಲಿ ಬ್ಯೂಸಿ ಇದ್ದ ಹಿನ್ನೆಲೆಯಲ್ಲಿ ಹನಿಟ್ರ್ಯಾಪ್ ಕುರಿತು ದೂರು ನೀಡಿರಲಿಲ್ಲ. ಇಂದು ಬೆಳಿಗ್ಗೆಯಿಂದ ಕುಳಿತು ದೂರು ಬರೆದಿದ್ದೇನೆ ಇಂದೇ ಈ ಕುರಿತು ದೂರು ನೀಡುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಗೃಹ ಸಚಿವ ಪರಮೇಶ್ವರ್ ಎಲ್ಲೆ ಇದ್ದರೂ ಹುಡುಕಿಕೊಂಡು ಹೋಗಿ ದೂರು ಕೊಡುತ್ತೇನೆ. ಹಲವು ಕಾರ್ಯಕ್ರಮಗಳಿದ್ದ ಕಾರಣ ದೂರು ನೀಡಿರಲಿಲ್ಲ. ನಿನ್ನೆ ಸಿಎಂ  ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದೆ ಇನ್ನೂ ದೂರು ಯಾಕೆ ಕೊಟ್ಟಿಲ್ಲ ಎಂದು ಸಿಎಂ ಪ್ರಶ್ನಿಸಿದರು ಇಂದು ದೂರು ಕೊಡುತ್ತೇನೆ ಎಂದು ಸಿಎಂಗೆ ಹೇಳಿದ್ದೇನೆ. ಹನಿಟ್ರ್ಯಾಪ್ ಯತ್ನ ವಿಚಾರ ಹೈಕಮಾಂಡ್ ಗಮನಕ್ಕೂ ಹೋಗಿದೆ. ಮಾರ್ಚ್ 30ರ ನಂತರ ದೆಹಲಿಗೆ ಹೋಗುತ್ತೇನೆ ಹೈಕಮಾಂಡ್ ನಾಯಕರನ್ನ ಭೇಟಿಯಾಗುತ್ತೇನೆ  ಎಂದರು.

ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ದಳು.  2ಬಾರಿ ಬಂದಾಗ ಹುಡುಗಿ ಬೇರೆ ಬೇರೆ  ಇದ್ದರು, .ಹೈಕೋರ್ಟ್ ಲಾಯರ್ ಅಂತಾ ಹೇಳಿಕೊಂಡು ಬಂದಿದ್ದರು. ಬಂದಿದ್ದವರು ಅಪರಿಚಿತರು  ಎಂದು ಕೆಎನ್ ರಾಜಣ್ಣ ತಿಳಿಸಿದರು.

ನ್ಯಾಯಾಧೀಶರನ್ನ ಹನಿಟ್ರ್ಯಾಫ್ ಮಾಡಲಾಗಿದೆ ಎಂದು ಹೇಳಿಲ್ಲ . ಹನಿಟ್ರ್ಯಾಪ್ ಬಗ್ಗೆ ಸುಪ್ರೀಂಕೋರ್ಟ್ ಗೆ  ಜಾರ್ಖಂಡ್ ಮೂಲದ ವ್ಯಕ್ತಿ ಪಿಐಎಲ್ ಹಾಕಿದ್ದಾರೆ.  ಜಡ್ಜ್ ಗಳ ಮೆಲೆ ಹನಿಟ್ರ್ಯಾಪ್ ಆಗಿದೆ ಅನ್ನೋದು ಸುಳ್ಳು ವದಂತಿ ಎಂದು ಸ್ಪಷ್ಟಪಡಿಸಿದರು.

Key words:  complaint, honey trap, today, Minister, K.N. Rajanna