ಏಪ್ರಿಲ್ ನಿಂದ 10 ಕೆಜಿ ಅಕ್ಕಿ ಕೊಡುತ್ತೇವೆ- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು,ಮಾರ್ಚ್,18,2025 (www.justkannada.in): ನಮ್ಮ ಬಳಿ ಅಕ್ಕಿ ಇದೆ.  ಕೇಂದ್ರವೂ ಅಕ್ಕಿ ಕೊಡಲು ಸಿದ್ದವಿದೆ. ಏಪ್ರಿಲ್ ತಿಂಗಳಿನಿಂದ ಬಿಪಿಎಲ್ ಕಾರ್ಡುದಾರರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ,  ಕಳೆದ ತಿಂಗಳಿನಿಂದ ನಮ್ಮ ಬಳಿ ಅಕ್ಕಿ ಇದೆ. ನಾವು ನಿರ್ಣಯ ಮಾಡಿದಂತೆ ಹೆಚ್ಚುವರಿ ಅಕ್ಕಿಗೆ ಹಣ ಕೊಟ್ಟೆವು. ಈಗ ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡಲು ಸಿದ್ದವಿದೆ. ಹೀಗಾಗಿ  ಏಪ್ರಿಲ್ ನಿಂದ ಹಣದ ಬದಲಾಗಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದರು.

ಸಿಎಂ ಬದಲವಾಣೆ ವಿಷಯ ನಮ್ಮ ಮುಂದಿಲ್ಲ.  ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾವು ಏನು ಮಾತನಾಡಲ್ಲ ಎಂದು ಕೆಎಚ್ ಮುನಿಯಪ್ಪ ತಿಳಿಸಿದರು.

Key words:  10 kg, rice, April,  Minister, KH Muniyappa