ನವದೆಹಲಿ,ಫೆಬ್ರವರಿ,14,2025 (www.justkannada.in): ಎಐಸಿಸಿ ಹೇಳಿದರೇ ನಾನು ಮಂತ್ರಿ ಸ್ಥಾನ ಬಿಟ್ಟು ಕೆಪಿಸಿಸಿ ಅಧ್ಯಕ್ಷನಾಗುತ್ತೇನೆ. ಒನ್ ಮ್ಯಾನ್ ಒನ್ ಪೋಸ್ಟ್ ಗೆ ಬದ್ದನಾಗಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.
ಇಂದು ನವದೆಹಲಿಯಲ್ಲಿ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ದಲಿತ ಸಮಾವೇಶಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಚಿತ್ರದುರ್ಗ, ದಾವಣಗೆರೆ, ಮೈಸೂರು, ಹುಬ್ಬಳ್ಳಿ ಅಥವಾ ಬೆಂಗಳೂರಿನಲ್ಲಿ ಸಮಾವೇಶ ನಡೆಸಲು ಪ್ಲಾನ್ ಮಾಡಲಾಗುತ್ತದೆ. ಗ್ಯಾರಂಟಿ ಬಗ್ಗೆ ವಿಶ್ವಾಸ ಮೂಡಿಸಬೇಕಿದೆ. ಗ್ಯಾರಂಟಿ ಶಕ್ತಿ ತುಂಬಿದೆಯಾ ಎಂದು ತಿಳಿಯಬೇಕಿದೆ. ಸಮಾವೇಶದ ಬಗ್ಗೆ ವರಿಷ್ಟರ ಗಮನಕ್ಕೆ ತಂದಿದ್ದೇನೆ . ಖರ್ಗೆ ರಾಹುಲ್ ಗಾಂಧಿ ಅವರಿಗೂ ಆಹ್ವಾನ ನೀಡಲಾಗಿದೆ . ಸಮಾವೇಶದ ಬಗ್ಗೆ ಎಐಸಿಸಿ ಅಧ್ಯಕ್ಷರಿಗೆ ವಿವರಿಸಿದ್ದೇವೆ ಎಂದರು.
ದಲಿತ ಸಿಎಂ ಕುರಿತು ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ದಲಿತ ಸಿಎಂ ಸ್ಥಾನ ಕೇಳಿದ್ರೆ ತಪ್ಪೇನು ಯಾವ ಸಮುದಾಯ ಬೇಕಾದರೂ ಸಿಎಂ ಸ್ಥಾನ ಕೇಳಬಹುದು. ಈ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.
ಸಿಎಂ ಘೊಷಣೆ ಮಾಡುವಾಗ ಪ್ರೆಸ್ ರಿಲೀಸ್ ಮಾಡಿದ್ದರು. ಎಂಪಿ ಚುನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷರು ಮುಂದುವರೆಯಲಿದ್ದಾರೆ ಎಂದು. ಹೈಕಮಾಮಢ್ ಹೇಳಿದೆ ಅನ್ನೋ ಭಾವನೆ ಕಾರ್ಯಕರ್ತರಲ್ಲಿ ಇದೆ ಅಧ್ಯಕ್ಷರ ಬದಲಾವಣೆ ಮಾಡಿ ಎಂದು ಹೇಳುತ್ತಿಲ್ಲ. ಆದರೆ ಗೊಂದಲ ಬಗೆ ಹರಿಸಿ ಅನ್ನೋದು ನಮ್ಮ ಬಯಕೆ ಎಂದು ರಾಜಣ್ಣ ತಿಳಿಸಿದರು.
Key words: AICC, KPCC, president, minister, KN Rajanna