ಜಾತಿ ಗಣತಿ ವರದಿ ವಿರೋಧಿಸುವವರು ಅಂಕಿ ಅಂಶ ಆಧಾರವಾಗಿಟ್ಟುಕೊಂಡು ವಾದಿಸಲಿ- ಸಚಿವ ಕೆ.ಎನ್ ರಾಜಣ್ಣ

ಬೆಂಗಳೂರು,ಏಪ್ರಿಲ್,12,2025 (www.justkannada.in): ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿರುವ ಜಾತಿ ಜನಗಣತಿಗೆ  ಪರ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ಸಹಕಾರ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಕೆ.ಎನ್ ರಾಜಣ್ಣ, ಜಾತಿ ಗಣತಿ ವರದಿ ಬಗ್ಗೆ ನಮ್ಮಲ್ಲಿ ಅಸಮಾಧಾನವಿಲ್ಲ. ಜಾತಿಗಣತಿ  ವಿರೋಧಿಸುವವರು ಜಾತಿ ಗಣತಿ ವರದಿ ನೋಡಬೇಕು.  ಅಂಕಿ ಅಂಶ ಆಧಾರ ಇಟ್ಟುಕೊಂಡು ವಾದಿಸಲಿ ಎಂದು ತಿಳಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿಯಾದ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎನ್ ರಾಜಣ್ಣ, ಅಹಮದಾಬಾದ್ ಗೆ  ಹೋಗಿ ಬಂದ ಬಳಿಕ ಪರಮೇಶ್ವರ್ ಅವರನ್ನ ಭೇಟಿ ಮಾಡಬೇಕಿತ್ತು. ಹೀಗಾಗಿ ಪರಮೇಶ್ವರ್ ಅವರನ್ನ ಭೇಟಿಯಾಗಿದ್ದೇನೆ. ಭೇಟಿ ವೇಳೆ ಹಲವು ವಿಚಾರ ಚರ್ಚೆಯಾಗಿದೆ.  ಹನಿಟ್ರ್ಯಾಪ್ ಪ್ರಕರಣ ಬಗ್ಗೆ ಈಗ ಏನೂ ಮಾತನಾಡಲ್ಲ. ಅಂದು ಹನಿಟ್ರ್ಯಾಪ್ ಬಗ್ಗೆ  ಸುನೀಲ್ ಕುಮಾರ್ ಮಾತನಾಡಿದ್ದರು.  ನಾನು ಏನು ಹೇಳಿಲ್ಲ ಮಾರನೇ ದಿನ ಶಾಸಕ ಯತ್ನಾಳ್  ಸದನದಲ್ಲಿ ಪ್ರಸ್ತಾಪಿಸಿದರು. ನಮ್ಮವರೇ ಚೀಟಿ ಕೊಟ್ಟರು ಅಂತಾ ಯಾರು ಹೇಳಿದ್ದು..?  ಬಿಜೆಪಿ ಆರೋಪಕ್ಕೆ ನಾವು ಉತ್ತರ ಕೊಡ್ತಾನೆ ಇರಬೇಕಾಗುತ್ತೆ ಎಂದರು.

Key words: oppose, Caste Census Report, statistics, Minister, KN Rajanna