ಬಾಕಿ ಇರುವ RTC – NON RRT ಪ್ರಕರಣಗಳ ತ್ವರಿತ ವಿಲೇವಾರಿಗೆ ಸಚಿವ ಕೃಷ್ಣಭೈರೇಗೌಡ ಸೂಚನೆ

ಬೆಂಗಳೂರು,ಅಕ್ಟೋಬರ್,9,2024 (www.justkannada.in): ಬಾಕಿ ಇರುವ RTC – NON RRT ಪ್ರಕರಣಗಳ ತ್ವರಿತ ವಿಲೇವಾರಿ ಮಾಡುವಂತೆ ಎಲ್ಲಾ ಉಪ ವಿಭಾಗಾಧಿಕಾರಿಗಳಿಗೆ  ಕಂದಾಯ ಸಚಿವ ಕೃಷ್ಣಭೈರೇಗೌಡ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಇಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ  ಎಸಿ ಕೋರ್ಟ್ ಗಳಲ್ಲಿ ಬಾಕಿ ಇರುವ ಪ್ರಕರಣಗಳ ಪ್ರಗತಿ ಪರಿಶೀಲನೆಗೆ ಸಂಬಂಧಿಸಿದಂತೆ ಚರ್ಚಿಸಿದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಎಸಿಗಳ ಜೊತೆ ಇದು 9ನೇ ಸಭೆಯಾಗಿದೆ. ಕಳೆದ ವರ್ಷ ಜುಲೈ ನಲ್ಲಿ ಎಸಿ ಕೋರ್ಟ್ ಗಳಲ್ಲಿ ರಾಜ್ಯಾದ್ಯಂತ RTC – NON RRT ಪ್ರಕರಣಗಳು ಒಟ್ಟಾರೆ 73,682 ತಕರಾರು ಪ್ರಕರಣಗಳು ಬಾಕಿ ಇದ್ದವು. ಆದರೆ, ಈ ಪ್ರಕರಣಗಳ ಸಂಖ್ಯೆಯನ್ನು ಇದೀಗ 40,475ಕ್ಕೆ ಇಳಿಸಲಾಗಿದೆ. ಒಟ್ಟಾರೆ ಕಳೆದ ಒಂದು ವರ್ಷದಲ್ಲಿ 33,207 ಪ್ರಕರಣಗಳನ್ನು  ಇತ್ಯರ್ಥಗೊಳಿಸಲಾಗಿದೆ.

ತಕರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ರೈತರಿಗೆ ಶೀಘ್ರ ನ್ಯಾಯ ಒದಗಿಸುವ ಸಲುವಾಗಿ, ರೆಗ್ಯುಲರ್ ಕೋರ್ಟ್ ಗಳ ಜೊತೆ ತುಮಕೂರು ಮಂಡ್ಯ ಮೈಸೂರು ರಾಮನಗರ ಬೆಂಗಳೂರು ಗ್ರಾಮಾಂತರ, ಕುಂದಾಪುರ ಸೇರಿ 11 ಜಿಲ್ಲೆಗಳಲ್ಲಿ 20ಕ್ಕೂ ಅಧಿಕ ವಿಶೇಷ ನ್ಯಾಯಾಲಯಗಳಿಗೆ ಚಾಲನೆ ನೀಡಲಾಗಿದೆ. ಅಲ್ಲದೆ, ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗೂ ಅಧಿಕಾರಿಗಳಿಗೆ ಇಂದಿನ ಸಭೆಯಲ್ಲಿ ಸಮಯದ ಗಡುವು ನಿಗದಿ ಮಾಡಲಾಗಿದೆ.

Key words: Minister, Krishnabhairegowda, disposal,  RTC – NON RRT cases