ಬೆಂಗಳೂರು, ಡಿ,6,2019(www.justkannada.in): ಅನರ್ಹ ಶಾಸಕರಿಗೆ ಸ್ಥಾನ ನೀಡುವ ವಿಚಾರವನ್ನ ಐಶ್ವರ್ಯ ರೈಗೆ ಹೋಲಿಕೆ ಮಾಡಿ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.
ವಯಸ್ಸಿಗೆ ಬಂದವರೆಲ್ಲಾ ‘ಐಶ್ವರ್ಯಾ ರೈ ಬೇಕು ಅಂತಾರೆ , ಆದರೆ ಐರ್ಶರ್ಯಾ ಇರುವುದು ಒಬ್ಬಳೇ ಅಲ್ವಾ?’ ಎಂದು ಸಚಿವ .ಕೆ.ಎಸ್ ಈಶ್ವರಪ್ಪ ಪ್ರಶ್ನೆ ಮಾಡಿದ್ದು ಟೀಕೆಗೆ ಗುರಿಯಾಗಿದೆ.
ಉಪ ಚುನಾವಣೆ ರಿಸಲ್ಟ್ ಬಳಿಕ ಅನರ್ಹ ಶಾಸಕರು ಗೆದ್ದರೇ ಸ್ಥಾನ ನೀಡಿಕೆ ಮತ್ತು ಮತ್ತಷ್ಟು ಡಿಸಿಎಂ ಹುದ್ದೆಗಳ ಸೃಷ್ಟಿಸುವ ಕುರಿತು ಕೇಳಿದ ಪ್ರಶ್ನೆಗೆ ? ಉತ್ತರಿಸಿದ ಕೆ.ಎಸ್ ಈಶ್ವರಪ್ಪ, ವಯಸ್ಸಿಗೆ ಬಂದವರೆಲ್ಲಾ ‘ಐಶ್ವರ್ಯಾ ರೈ ಬೇಕು ಅಂತಾರೆ , ಆದರೆ ಐರ್ಶರ್ಯಾ ಇರುವುದು ಒಬ್ಬಳೇ ಅಲ್ವಾ?’ ಅವರು ಅಪೇಕ್ಷೆ ಪಡುತ್ತಾರೆ. ಆದರೆ ಅವರಿಗೆ ಅವಕಾಶ ಸಿಗಬೇಕಲ್ಲವೇ. ಅನರ್ಹರಿಗೆ ಏನು ಹುದ್ದೆ ಕೊಡಬೇಕು ಎಂಬುದನ್ನ ಸಿಎಂ ತೀರ್ಮಾನಿಸುತ್ತಾರೆ ಎಂದರು.
Key words: minister- ks eshwarappa-disqualified MLA- Aishwarya Rai