ಅಯೋಧ್ಯೆ ಶ್ರೀರಾಮನ ಫ್ಯಾಕ್ಟರಿಗೆ ಆರ್ಡರ್ ಕೊಟ್ಟು ಕೇಸರಿ ಶಾಲು ತರಿಸಿದ್ದೇವೆ-ಡಿಕೆಶಿಗೆ ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್

ಚಿತ್ರದುರ್ಗ,ಫೆಬ್ರವರಿ,9,2022(www.justkannada.in):  ಸೂರತ್ ನಿಂದ 50 ಲಕ್ಷ ಕೇಸರಿ ಶಾಲನ್ನ ತರಿಸಲಾಗಿದೆ ಎಂದು ಆರೋಪಿಸಿದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಅಯೋಧ್ಯೆ ಶ್ರೀರಾಮನ ಫ್ಯಾಕ್ಟರಿಗೆ ಆರ್ಡರ್ ಕೊಟ್ಟು ಕೇಸರಿ ಶಾಲು ತರಿಸಿದ್ದೇವೆ. ಹನುಮಾನ್ ಟ್ರಾನ್ಸ್ ಫೋರ್ಟ್ ಮೂಲಕ ಕೇಸರಿ ಶಾಲು ರಾಜ್ಯಕ್ಕೆ ಬಂದಿದೆ. ಕೇಸರಿ ಕೋಟಿ ಕೋಟಿ ಯುವಕರ ಹೃದಯ ತಲುಪಿದೆ ಎಂದು ಟಾಂಗ್ ನೀಡಿದರು.  

ಕನಕಪುರದಲ್ಲಿ ಡಿಕೆ ಬ್ರದರ್ಶ್ ಫ್ಯಾಕ್ಟರಿ ಇದೆ.  ಬಂಡೆ ಕದ್ದು ಬೇರೆ ರಾಜ್ಯಕ್ಕೆ ಕಳಿಸುವ ಟ್ರಾನ್ಸ್ ಪೋರ್ಟ್ ಇದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದರು.

ಉಡುಪಿ ಶಾಲೆಯಲ್ಲಿ 6 ಜನ ಮಾತ್ರ ಹಿಜಾಬ್ ಧರಿಸಿದ್ರು.  90 ಮುಸ್ಲೀಂ ವಿಧ್ಯಾರ್ಥಿಗಳು ಸಮವಸ್ತ್ರ ಧರಿಸಿದ್ದರು. 6 ಮಕ್ಕಳಿಗೆ ಸಮಾಧಾನಪಡಿಸಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಕಾಂಗ್ರೆಸ್ ಮತ್ತು ಮುಸ್ಲೀಂ ಮುಖಂಡರು ಸಮಾಧಾನಪಡಿಸಬೇಕಿತ್ತು. ವ್ಯವಸ್ಥಿತವಾಗಿ ನಡೆಸುತ್ತಿರುವ ಸಂಚು ಇದು.  ಇದನ್ನ ಖಂಡಿಸುತ್ತೇವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

Key words: minister-KS Eshwarappa-DK shivakumar

ENGLISH SUMMARY…

[2:47 pm, 10/02/2022] kishor jk bangalore: “We had placed an order to the Srirama factory in Ayodhya to supply saffron stoles”: Minister K.S. Eshwarappa ridicules D.K. Shivakumar
Chitradurga, February 9, 2022 (www.justkannada.in): Rural Development Minister K.S. Eshwarappa today ridiculed KPCC President D.K. Shivakumar alleged that the State BJP had ordered 50 lakh saffron stoles from Surat.
Speaking in Chitradurga today, Minister K.S. Eshwarappa sarcastically said, “We had placed an order to the Srirama Factory in Ayodhya to supply the saffron shawls. It was supplied through Hanuman Transport. However, today the saffron color has reached crores of youth.”
“The DKS brothers own a factory in Kanakapura. They also own a travels to transport the stolen granite stones to other states,” he ridiculed.
“Only 6 students had worn the hijab in the school in Udupi, 90 students were wearing uniforms. If they had pacified the six students so much uproar wouldn’t have taken place. The Congress and Muslim leaders should have pacified them. This is all pre-planned. I strongly condemn it,” he said.
Keywords: Minister K.S. Eshwarappa/ KPCC President D.K. Shivakumar/ ridicules/ saffron stoles