ವಿಜಯಪುರ,ಮಾರ್ಚ್, 31,2025 (www.justkannada.in): ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಸೇರ್ಪಡೆಗೆ ಅರ್ಜಿ ಹಾಕಿಲ್ಲ. ಅರ್ಜಿ ಹಾಕಿದರೇ ನೋಡೋಣ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಯತ್ನಾಳ್ ಒಂದು ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಅವರು ಕಾಂಗ್ರೆಸ್ ಗೆ ಬರುವುದು ಕಷ್ಟ ಎಂದರು.
ಕೆಪಿಸಿಇ ಅಧ್ಯಕ್ಷರ ಬದಲಾವಣೆ ಬಗ್ಗೆ ‘ನಾವು ಮಾತನಾಡುವುದರಲ್ಲಿ ಯಾವ ಅರ್ಥವಿಲ್ಲ ಎಲ್ಲರೂ ವರಿಷ್ಠರನ್ನ ಭೇಟಿ ಮಾಡುತ್ತಾರೆ. ಅಭಿಪ್ರಾಯ ಸಲಹೆ ಪಡೆಯೋದು ಇರುತ್ತದೆ. ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಸಿಎಂ, ಡಿಸಿಎಂ ನಿರ್ಧಾರ ಮಾಡುತ್ತಾರೆ ಎಂದರು.
ಸಚಿವ ರಾಜಣ್ಣಗೆ ಹನಿಟ್ರ್ಯಾಪ್ ಯತ್ನ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಒತ್ತಡ ಇಲ್ಲ. ದೂರು ನೀಡುವುದು ರಾಜಣ್ಣಗೆ ಬಿಟ್ಟ ವಿಚಾರ ಯಾಕೆ ದೂರು ನೀಡಿಲ್ಲ ಎಂದು ರಾಜಣ್ಣರನ್ನ ಕೇಳಿ ಎಂದರು.
Key words: Yatnal, join, Congress, Minister, M.B. Patil