ಜಯಪುರ,ಮಾರ್ಚ್,31,2025 (www.justkannada.in): ಹನಿಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಕೊಡೊದು ಸಚಿವ ಕೆ.ಎನ್ ರಾಜಣ್ಣ ಅವರಿಗೆ ಬಿಟ್ಟ ವಿಚಾರ. ಪಕ್ಷದಲ್ಲಿ ಯಾವುದೆ ಒತ್ತಡ ಇಲ್ಲ. ಯಾಕೆ ಏನು ಅನ್ನೋದನ್ನ ರಾಜಣ್ಣರಿಗೆ ಕೇಳಬೇಕು ಎಂದ ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್ ತಿಳಿಸಿದರು.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ರಾಜಣ್ಣ ಪುತ್ರನ ಹತ್ಯೆಗೆ ಸುಪಾರಿ ವಿಚಾರ, ಗೃಹ ಸಚಿವರು, ಪೊಲೀಸರು ಇದ್ದಾರೆ. ಪ್ರಕರಣ ಬಯಲಿಗೆ ಎಳೆಯುತ್ತಾರೆ ಎಂದರು.
ಸಂಪುಟ ಪುನರ್ ರಚನೆ, ಸಿಎಂ ನಿರಾಸಕ್ತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್, ಅದನ್ನ ಡಿಸಿಎಂ, ಸಿಎಂ ಗೆ ಕೇಳಬೇಕು. ಯಾರು ಆಸಕ್ತಿ ಹೊಂದಿದ್ದಾರೋ, ಯಾರು ಹೊಂದಿಲ್ಲವೊ ಅವರನ್ನೆ ಕೇಳಬೇಕು ಎಂದರು
ಕೆಪಿಸಿಸಿ ರಾಜ್ಯಾಧ್ಯಕ್ಷರ ಸ್ಥಾನ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂಬಿ ಪಾಟೀಲ್, ಹೈಕಮಾಂಡ್ ನಿರ್ಧಾರ ಮಾಡುತ್ತೆ. ಇದು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ನಾವು ಮಾತನಾಡುವುದರಲ್ಲಿ ಅರ್ಥ ಇಲ್ಲ. ಎಲ್ಲರೂ ದೆಹಲಿ ಹೋಗ್ತಾರೆ, ಪಕ್ಷದ ವರಿಷ್ಠರನ್ನ ಭೇಟಿ ಮಾಡಲು ಹೋಗ್ತಾರೆ. ಹೈಕಮಾಂಡ್ ಭೇಟಿ ಮಾಡಿ ಮಾತನೋಡೋದು ಇರುತ್ತೆ. ಹೇಳೋದು ಕೇಳೋದು ಇರುತ್ತೆ. ಅಭಿಪ್ರಾಯ, ಸಲಹೆ ಪಡೆಯೋದು ಇರುತ್ತೆ ಎಂದು ತಿಳಿಸಿದರು.
ವಿಜಯಪುರ ನಗರ ಶಾಸಕ ಬಸನಗೌಡಾ ಪಾಟೀಲ್ ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್, ಅದು ಅವರ ವಿಚಾರ, ಅದಕ್ಕೆ ನಾನು ಏನು ಹೇಳಲ್ಲ. ಅವರು ನಮ್ಮ ಪಕ್ಷಕ್ಕೆ ಯಾವುದೇ ಅರ್ಜಿ ಹಾಕಿಲ್ಲ.ಹಾಕಿದರೂ ಕೂಡ ನಮ್ಮಲ್ಲಿ ಅವರನ್ನು ಸೇರಿಸಿಕೊಳ್ಳಲು ಕಷ್ಟ ಇದೆ. ಅವರು ಒಂದು ಸಮಾಜದ (ಮುಸ್ಲಿಂ) ವಿರುದ್ದ ಬಹಳಷ್ಟು ಮಾತನಾಡಿದ್ದಾರೆ. ಕಾರಣ ನಮ್ಮಲ್ಲಿ ಅವರು ಬರುವುದು ಕಷ್ಟ ಇದೆ. ಇದಾಗ್ಯೂ ನಮ್ಮಲ್ಲಿ ಅವರನ್ನು ತೆಗೆದುಕೊಳ್ಳುವದು ಹೈ ಕಮಾಂಡ್ ನಿರ್ಧಾರ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಅದು ಅ ಪ್ರಸ್ತುತ, ಅವರು ಬರತಾರೆ ಹೋಗತಾರೆ ಎಂಬುದು ಸರಿಯಲ್ಲ ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದರು.
Key words: no pressure, party, file a complaint , Minister, M.B. Patil