ಭ್ರಷ್ಟಾಚಾರ ಹೇಳಿಕೆ : ಶಾಸಕ ರಾಯರೆಡ್ಡಿ ವಿರುದ್ದ ಕ್ರಮ ಕೈಗೊಳ್ತಾರೆ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಏಪ್ರಿಲ್,10,2025 (www.justkannada.in): ಭ‍್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ವಿರುದ್ದ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್,  ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ರಾಯರೆಡ್ಡಿ ಹೇಳಿಕೆಯಿಂದ ಮುಜುಗರ ಆಗಿದೆ.  ಸಿಎಂ ಸಿದ್ದರಾಮಯ್ಯ , ಕಾಂಗ್ರೆಸ್ ವರಿಷ್ಠರು ಎಐಐಸಿ ಅಧ್ಯಕ್ಷರು ಗಮನಿಸುತ್ತಾರೆ.  ಖಂಡಿತವಾಗಿ ಬಸವರಾಜ ರಾಯರೆಡ್ಡಿ ವಿರುದ್ದ ಕ್ರಮ ಕೈಗೊಳ್ಳುತ್ತಾರೆ ಎಂದರು.

ಬಸವರಾಜ ರಾಯರೆಡ್ಡಿ ಯಾರ ವಿರುದ್ದ ಆರೋಪ ಮಾಡಿದ್ರು ಹೇಳಲಿ ಎಂದು ಸಚಿವ ಎಂ.ಬಿ ಪಾಟೀಲ್ ಆಗ್ರಹಿಸಿದರು.

Key words: Corruption, statement, Action, MLA, Basavaraj Rayareddy, Minister, M.B. Patil