ಮರಿಗೌಡ ಅಷ್ಟೇ ಅಲ್ಲ ಸಚಿವ ಮಹದೇವಪ್ಪ ಕೂಡ ರಾಜೀನಾಮೆ ಕೊಡ್ತಾರೆ- ಸ್ನೇಹಮಯಿ ಕೃಷ್ಣ

ಮೈಸೂರು, ಅಕ್ಟೋಬರ್,16,2024 (www.justkannada.in):  ಮುಡಾ ಹಗರಣ ಸಂಬಂಧ ಮರಿಗೌಡ ಅಷ್ಟೇ ಅಲ್ಲ ಸಚಿವ ಮಹದೇವಪ್ಪ ಕೂಡ ರಾಜೀನಾಮೆ ಕೊಡ್ತಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸ್ನೇಹಮಯಿ ಕೃಷ್ಣ, ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ. ಮುಡಾ ಹಗರಣದಲ್ಲಿ ಎಲ್ಲರೂ ಕೂಡ ರಾಜೀನಾಮೆ ಕೊಟ್ಟು ಜೈಲಿಗೆ ಹೋಗುವ ಸಮಯ ಬರತ್ತೆ. ಸಚಿವ ಮಹದೇವಪ್ಪ ಕೂಡ ಅಕ್ರಮಗಳಿಗೆ ಸಹಕಾರ ನೀಡಿದ್ದಾರೆ. ಮಹದೇವಪ್ಪ ತಮ್ಮನ ಮಗ ನವೀನ್ ಬೋಸ್ ಹೆಸರಲ್ಲಿ ಸೆಟೆಲ್ ಮೆಂಟ್ ಡೀಡ್ ಮೂಲಕ ಸೈಟ್ ಪಡೆದುಕೊಂಡಿದ್ದಾರೆ. ಇದಕ್ಕೆ ಮಹದೇವಪ್ಪ ಸಹಕಾರ ಇದೆ ಎಂದರು.

ಸಿಎಂ ಸೂಚನೆ ಮೇರೆಗೆ ರಾಜೀನಾಮೆ ಕೊಟ್ಟಿದ್ದೇನೆ ಎಂಬ ಮರಿಗೌಡ ಹೇಳಿಕೆ ಸುಳ್ಳು. ತಪ್ಪು ಮಾಡಿದ್ದಾರೆ ರಾಜೀನಾಮೆ ಕೊಟ್ಟಿದ್ದಾರೆ. ಜನರಿಗೆ ಸುಳ್ಳು ಹೇಳುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಅನೇಕರು ರಾಜೀನಾಮೆ ಕೊಡ್ತಾರೆ . ಪ್ರಕರಣದಲ್ಲಿ ಸಿಎಂ ಸೇರಿ ಹಲವರು ರಾಜೀನಾಮೆ ಕೊಡ್ತಾರೆ ಎಂದು ಸ್ನೇಹಮಯಿ ಕೃಷ್ಣ ಹೇಳಿದರು.

ತಾಕತ್ತಿದ್ದರೆ ದಾಖಲೆ ಮುಂದಿಟ್ಟುಕೊಂಡು ಮಾತನಾಡಲಿ: ಎಂ.ಲಕ್ಷ್ಮಣ್ ಗೆ ಸವಾಲು

ತನ್ನ ವಿರುದ್ದ ವಾಗ್ದಾಳಿ ನಡೆಸಿ ಲೋಕಾಯುಕ್ತಕ್ಕೆ ದೂರು ನೀಡಿರುವ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಿರುದ್ದ ಕಿಡಿಕಾರಿದ ಸ್ನೇಹಮಯಿ ಕೃಷ್ಣ, ಎಂ.ಲಕ್ಷ್ಮಣ್ ಗೆ ಒಬ್ಬ ಅಯೋಗ್ಯ. ತಾಕತ್ತಿದ್ದರೆ ದಾಖಲೆ ಮುಂದಿಟ್ಟುಕೊಂಡು ಮಾತನಾಡಲಿ. ನಾಯಿ ಥರ ಬೊಗಳಿದರೆ ನಾನು ಕೇರ್ ಮಾಡಲ್ಲ. ಆನೆ ನಡೆಯುವಾಗ ನಾಯಿಗಳು ಬೊಗಳುತ್ತವೆ. ನಾನು ಇಂತಹವರಿಗೆ ಕೇರ್ ಮಾಡಲ್ಲ‌. ನನ್ನ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿವೆ ಎಂದು ಕುಟುಕಿದರು.

ತಮ್ಮ ವಿರುದ್ಧ ಲೋಕಾಯುಕ್ತಕ್ಕೆ ಲಕ್ಷ್ಮಣ್ ದೂರು ವಿಚಾರ ಕುರಿತು ಪ್ರತಿಕ್ರಿಯಿಸಿದ ಸ್ನೇಹಮಯಿ ಕೃಷ್ಣ,  ಈ ಬೆದರಿಕೆಗೆ ನಾನು ಹೆದರುವುದಿಲ್ಲ. ಲಕ್ಷ್ಮಣ್ ಸಾಧನೆ ಏನು ? ಸುಖ ಸುಮ್ಮನೆ ಆರೋಪ ಮಾಡ್ತಾರೆ. ಒಂದು ದಾಖಲೆ ಬಿಡುಗಡೆ ಮಾಡಿಲ್ಲ. ನಾನು ಸವಾಲ್ ಹಾಕುತ್ತೇನೆ. ಲಕ್ಷ್ಮಣ್ ಗೆ ತಾಕ್ಕತ್ತಿದ್ರೆ ನನ್ನ ಮೇಲೆ ದಾಖಲೆ ಬಿಟ್ಟು ಮಾತನಾಡಲಿ. ನಾನೊಬ್ಬ ದೂರುದಾರ ನನ್ನ ಈ ರೀತಿ ಬೆದರಿಸಲು ನೋಡಿದ್ರೆ ನಾನು ಹೆದರಲ್ಲ. 100 ಕೋಟಿ ಕೇಳಿದ್ರು ಬ್ಲಾಕ್ ಮೇಲರ್ ಅಂತಾರೆ. ಯಾರಿಗೆ ಕೇಳಿದ್ದೆ ಕರೆದುಕೊಂಡು ಬನ್ನಿ ಅಂದರೆ ಮಾತೆ ಇಲ್ಲ. ಲಕ್ಷ್ಮಣ್ ದೂರು ನೀಡಿರುವ ಅರ್ಜಿಯನ್ನು ಕೋರ್ಟ್ ಗೆ ಸಲ್ಲಿಸುತ್ತೇನೆ . ಮುಂದಿನ ದಿನಗಳಲ್ಲಿ ಲಕ್ಷ್ಮಣ್ ಗೂ ಕೂಡ ಮುಡಾ ಕಂಟಕವಾಗಲಿದೆ ಎಂದು ಎಚ್ಚರಿಕೆ ನೀಡಿದರು.

Key words:, Minister, Mahadevappa, also, resign,  Snehamai Krishna