ಬೆಂಗಳೂರು,ಡಿಸೆಂಬರ್,7,2022(www.justkannada.in): ನಾವೇನು ಕಾಂಗ್ರೆಸ್ ಬಾಗಿಲು ತಟ್ಟಿಲ್ಲ. ಬಿಜೆಪಿಯಲ್ಲಿ ನಮ್ಮನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಸದ್ಯ ನಾವು ನರಕದಿಂದ ಆಚೆ ಬಂದಿದ್ದೇವೆ. ರಾಜಕೀಯ ಬಿಟ್ಟು ಕೂಲಿ ಕೆಲಸ ಬೇಕಾದರೂ ಮಾಡುತ್ತೇನೆ. ಆದ್ರೆ ಮತ್ತೆ ಕಾಂಗ್ರೆಸ್ ಸಹವಾಸ ಮಾತ್ರ ಮಾಡಲ್ಲ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.
ಮತದಾರರ ಹೆಸರು ಡಿಲಿಟ್ ಆಗಿದೆ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಮುನಿರತ್ನ, ಮತದಾರರ ಹೆಸರು ಡಿಲಿಟ್ ಆಗಿದೆ ಅಂತಾರೆ ನಿಮ್ಮ ಜತೆ 7 ವರ್ಷ ಇದ್ದೆ. ಆಗ ಡಿಲಿಟ್ ಆಗಲಿಲ್ಲ. ಈಗ ಬಿಜೆಪಿಯಲ್ಲಿರುವುದಕ್ಕೆ ಡಿಲಿಟ್ ಆಗಿದೆಯಾ..? ನಿಮ್ಮ ಜೊತೆ ನಾನು ಇದ್ದಾಗ ಪವಿತ್ರನಾಗಿದ್ದೆ ಈಗ ನಾನು ಅಪವಿತ್ರನಾ..? ಎಂದು ಪ್ರಶ್ನಿಸಿದರು.
ಡಿ.ಕೆ ಸುರೇಶ್ ಸಂಸದ ಸ್ಥಾನಕ್ಕೆ ಘನತೆ ಬರುವಂತೆ ಹೇಳಿಕೆ ನೀಡಲಿ . ಮತದಾರರ ಪಟ್ಟಿ ಡಿಲಿಟ್ ಮಾಡುವಷ್ಟು ಕೀಳುಮಟ್ಟ ನನ್ನದಲ್ಲ ತೇಜೋವಧೆ ಮಾಡಿ ಚುನಾವಣೆಯಲ್ಲಿ ಗೆಲ್ತೀನಿ ಅನ್ನೋದನ್ನ ಬಿಟ್ಟುಬಿಡಿ. ಸೇರ್ಪಡೆ ಡಿಲಿಟ್ ಕೆಲಸ ನಮ್ಮದಲ್ಲ. ಅಂತಹ ಅಭ್ಯಾಸ ನಿಮ್ಮಗಿದೆ. ಮಲ್ಲೇಶ್ವರಂನಲ್ಲಿ ನನ್ನದು 5ನೇ ತಲೆಮಾರು’. ಗೊತ್ತಲ್ಲದಿದ್ದರೇ ನಿಮ್ಮ ಅಣ್ಣನನ್ನ ಕೇಳಿ. ನಾಮಪತ್ರ ಸಲ್ಲಿಸಿ ನಾನು ಕ್ಷೇತ್ರದಲ್ಲಿ ಮತಯಾಚನೆ ಮಾಡಲ್ಲ ನೀವು ಅದೇ ರೀತಿ ಮಾಡಿ ಜನರ ತೀರ್ಮಾನಕ್ಕೆ ಬಿಡೋಣ ಎಂದು ಸವಾಲು ಹಾಕಿದರು.
ಡಿ.ಕೆ ಸುರೇಶ್ ರದ್ದು ಒಡೆದು ಆಳುವ ನೀತಿ ಸದ್ಯಕ್ಕೆ ಬೆಂಗಳೂರಿನಲ್ಲಿ ಇವರ ಆಟ ನಡೆಯಲ್ಲ ಆರ್ ಆರ್ ನಗರಕ್ಕೆ ಡಿಕೆಸುರೇಶ್ ಕೊಡುಗೆ ಏನು..? ಇನ್ನಾದರೂ ಸಣ್ಣತನ ಬಿಟ್ಟು ದೊಡ್ಡತನ ತೋರಿಸಲಿ ಎಂದು ಸಚಿವ ಮುನಿರತ್ನ ಟಾಂಗ್ ನೀಡಿದರು.
Key words: minister-Muniratna-tong-congress-MP-DK Suresh