ವಿಜಯಪುರ,ಜೂನ್,8,2022(www.justkannada.in): ಮುಂದಿನ ಸಿಎಂ ಬಿ.ವೈ ವಿಜಯೇಂದ್ರ ಎಂಬ ಕೂಗು ಕೇಳಿ ಬರುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಮುರುಗೇಶ್ ನಿರಾಣಿ, ಸಿಎಂ ಮಗ ಸಿಎಂ ಆದರೆ ಏನು ತಪ್ಪು..? ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ಬಿವೈ ವಿಜಯೇಂದ್ರ ಪರ ಬ್ಯಾಟಿಂಗ್ ಬೀಸಿ ಮಾತನಾಡಿರುವ ಸಚಿವ ಮುರುಗೇಶ್ ನಿರಾಣಿ, ಸಿಎಂ ಮಗ ಸಿಎಂ ಆದರೆ ಏನು ತಪ್ಪು..? ವಿಜಯೇಂದ್ರ ಸಿಎಂ ಆಗಲಿ. ವಿಜಯೇಂದ್ರಗೆ ನಾಯಕನಾಗುವ ಕ್ವಾಲಿಟಿ ಇದೆ. ವಿಜೆಯೇಂದ್ರ ಹೆಚ್ಚಿನ ಕೆಲಸ ಮಾಡಿ ಬೆಳೆಯಲಿ ಎಂದಿದ್ದಾರೆ.
ನಿನ್ನೆ ಮೈಸೂರಿನಲ್ಲಿ ನಡೆದಿದ್ದ ದಕ್ಷಿಣ ಪದವೀಧರ ಚುನಾವಣಾ ಬಿಜೆಪಿ ಪ್ರಚಾರ ಸಭೆಯಲ್ಲಿ ಬಿವೈ ವಿಜಯೇಂದ್ರ ಬೆಂಬಲಿಗರು ಮುಂದಿನ ಸಿಎಂ ವಿಜಯೇಂದ್ರ ಎಂದು ಸಚಿವ ವಿ.ಸೋಮಣ್ಣ ಮುಂದೆಯೇ ಘೋಷಣೆ ಕೂಗಿದ್ದರು.
Key words: Minister – Murugesh Nirani- batting – BY Vijayendra.