ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಚಿವ ನಾರಾಯಣಗೌಡರು ನಮ್ಮ ಜೊತೆ ಮಾತನಾಡಿಲ್ಲ- ಡಿ.ಕೆ ಶಿವಕುಮಾರ್.

ಬೆಂಗಳೂರು,ಮಾರ್ಚ್,6,2023(www.justkannada.in) ರಾಜ್ಯ ವಿಧಾನಸಭೆ ಚುನಾವಣೆ  ಸಮೀಪಿಸುತ್ತಿದ್ದು ಈ ನಡುವೆ ಸಚಿವ ನಾರಾಯಣಗೌಡರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂಬ ಸುದ್ಧಿ ಹರಡಿದ್ದು ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಈ  ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್,  ಕೆ.ಸಿ. ನಾರಾಯಣ ಗೌಡರು ನಮ್ಮ ಜೊತೆ ಮಾತನಾಡಿಲ್ಲ. ಬೇರೆಯವರೂ ಮಾತನಾಡಿಲ್ಲ. ಅವರಿಂದ ಯಾರಿಗೆ ಏನು ತೊಂದರೆ ಆಗಿದೆ ಎಂದು ಗೊತ್ತಿಲ್ಲ. ಅವೆಲ್ಲವನ್ನೂ ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಇನ್ನು ಸಚಿವ ಸೋಮಣ್ಣ ಕಾಂಗ್ರೆಸ್ ಸೇರುವ ಕುರಿತು ವದಂತಿ ಹಿನ್ನೆಲೆ ಈ ಬಗ್ಗೆಯೂ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್,  ಕಾಂಗ್ರೆಸ್ ಸೇರುವ ಬಗ್ಗೆ ಸಚಿವ ವಿ.ಸೋಮಣ್ಣ ಸಹ ಯಾವತ್ತೂ ನನ್ನ ಜೊತೆ ಚರ್ಚೆ ಮಾಡಿಲ್ಲ. ಕನಕಪುರದಲ್ಲಿ ಹೌಸಿಂಗ್ ಬೋರ್ಡ್​​ನ ಕಾರ್ಯಕ್ರಮ ಇದೆ, ಅದಕ್ಕೆ ಬನ್ನಿ ಎಂದು ಕಾಗದ ಬರೆದಿದ್ದರು. ಯಾರಾದರೂ ಪಕ್ಷ ಸೇರುತ್ತೇನೆ ಎಂದು ಹೇಳಿದರೆ ಆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

Key words: Minister -Narayana Gowda -joining – Congress – DK Shivakumar.