ಬೆಂಗಳೂರು,ಏಪ್ರಿಲ್,21,2025 (www.justkannada.in): ಓಂ ಪ್ರಕಾಶ್ ಒಳ್ಳೆಯ ಅಧಿಕಾರಿಯಾಗಿದ್ದವರು. ನನ್ನ ಜೊತೆ ಕೆಲಸ ಮಾಡಿದ್ದರು. ಅವರ ಕೊಲೆಗೆ ಕಾರಣ ಏನೆಂಬುದು ಸಮಗ್ರ ತನಿಖೆಯಿಂದ ಗೊತ್ತಾಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಿವೃದ್ಧ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ ಪ್ರಕರಣ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಓಂ ಪ್ರಕಾಶ್ ಅವರ ಪತ್ನಿಯೇ ಹತ್ಯೆ ಮಾಡಿದ್ದರೆಂಬ ಮಾಹಿತಿ ಇದೆ. ಓಂ ಪ್ರಕಾಶ್ ನನ್ನ ಜೊತೆಗೆ ಕೆಲಸ ಮಾಡಿದ್ದರು ಒಳ್ಳೆಯ ಅಧಿಕಾರಿ ಈ ರೀತಿ ಆಗಬಾರದಿತ್ತು ಎಂದರು.
ತನಿಖೆ ಬಳಿಕ ಕೊಲೆಗೆ ಕಾರಣ ಏನೆಂದು ನಿರ್ಧಿಷ್ಟವಾಗಿ ಗೊತ್ತಗುತ್ತದೆ. ಸಮಗ್ರ ತನಿಖೆ ನಂತರ ಎಲ್ಲವೂ ತಿಳಿಯಲಿದೆ ತನಿಖೆ ಆಗುವವರೆಗೆ ಏನೂ ಹೇಳಲಾಗದು. ಏಣು ಕಾರಣ ಅಂತ ನಾವು ಊಹೆ ಮಾಡಲು ಆಗಲ್ಲ ಎಂದು ಪರಮೇಶ್ವರ್ ತಿಳಿಸಿದರು.
Key words: Om Prakash, murder, Case, Home Minister, Parameshwar